ಸಿದ್ದರಾಮಯ್ಯ ಹೀರೋ : ನಿರ್ಮಾಪಕ ಎಸ್‌ ನಾರಾಯಣ

Advertisement

ಕುಷ್ಟಗಿ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಸೋಲುವುದಿಲ್ಲ ಅವರು ಹೀರೋ ಆಗಿದ್ದಾರೆ ಎಂದು ಕೆಪಿಸಿಸಿಯ ರಾಜ್ಯ ಪ್ರಚಾರ ಸಮಿತಿಯ ಸದಸ್ಯ ಹಾಗೂ ನಿರ್ಮಾಪಕ ಎಸ್ ನಾರಾಯಣ್ ಹೇಳಿದರು.
ಪಟ್ಟಣದ ಸರ್ಕಿಟ್ ಹೌಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ವಲ್ಪ ಮತಗಳಿಂದ ಗೆದ್ದಿರಬಹುದು ಆದರೆ ಗೆಲುವಿನ ಅಂತರ ಮುಖ್ಯವಲ್ಲ ಬದಲಿಗೆ ಗೆಲುವು ಮುಖ್ಯವಾಗುತ್ತದೆ ಸಿದ್ದರಾಮಯ್ಯನವರ ಗೆಲುವು ನಿಶ್ಚಿತವಾಗಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ನಾಲಿಗೆ ಹರಿ ಬಿಡಬಾರದು: ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಸಚಿವ ಬಿ.ಸಿ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ಮುಖಂಡ ಹರಿಪ್ರಸಾದ್ ಅವರಿಗೆ ಪಿಂಪ್ ಎಂಬ ಪದವನ್ನು ಬಳಸಿದ್ದು ಸೊಚನಿಯ ಸಂಗತಿ‌ ಜನಪ್ರತಿನಿಧಿಗಳಾದವರು ಮಾತಿನ ಮೇಲೆ ಹಿಡಿತ ಸಾಧಿಸಬೇಕು. ಯಾವುದೇ ಕಾರಣಕ್ಕೂ ನಾಲಿಗೆಯನ್ನು ಹರಿ ಬಿಡಬಾರದು. ನಾಗರಿಕತೆಯಿಂದ ಮಾತನಾಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಮಾತಿನ ಮೇಲೆ ಹಡಿತ ಇಟ್ಟುಕೊಂಡು ಮಾತನಾಡಿದರೆ ಒಳ್ಳೆಯದಾಗುತ್ತದೆ ಈಗಾಗಲೇ ಬಿ ಸಿ ಪಾಟೀಲ್ ಅವರು ಕ್ಷಮೆಯಾಚಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಅಲೆ ಇದ್ದು ಮುಂದಿನ 2023 ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ದೊಡ್ಡ ಬಸನಗೌಡ ಪಾಟೀಲ್ ಬಯ್ಯಾಪುರ ಚಿರಂಜೀವಿ ಹಿರೇಮಠ್ ಮಂಜುನಾಥ್ ಕಟ್ಟಿಮನಿ,ಶಿವಕುಮಾರ, ಲಾಡ್ಲೇಮಷಾಕ ಯಲಬುರ್ಗಿ ಸೇರಿದಂತೆ ಅನೇಕರು ಇದ್ದರು.