ಕುಳಗೇರಿ ಕ್ರಾಸ್ (ಬಾಗಲಕೋಟೆ): ಸಾಹೇಬ್ರ ಸಿದ್ದರಾಮಯ್ಯ ಸಾಹೇಬರಿಗೆ ನಿವರ ಹೇಳ್ರಿ ಈ ಸಲಾನು ಬಾದಾಮಿಯಿಂದ ಸ್ಪರ್ಧೇ ಮಾಡ್ರಿ ಅಂಥ. ಯಾಕಂದ್ರ ನಮ್ಮ ಕ್ಷೇತ್ರ ಬಾಳ ಅಭಿವೃದ್ಧಿ ಮಾಡ್ಯಾರ ಅಂಥ ಗ್ರಾಮದ ಕಾರ್ಯಕರ್ತರು ಶಾಸಕ ಜಮೀರ ಅಹಮದ್ದ ಖಾನ್ ಅವರಿಗೆ ಮನವಿ ಮಾಡಿಕೊಂಡರು.
ಕಾರ್ಯಕ್ರಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ನಂತರ ಕಾರ್ಯಕರ್ತರನ್ನ ಉದ್ಧೇಶಿಸಿ ಮಾತನಾಡಿದರು ಸಿದ್ಧರಾಮಯ್ಯ ಸಾಹೇಬ್ರ ಯಾಕ್ ನಿಲ್ಲಬೇಕು ನನ್ನ ಕ್ಷೇತ್ರ ಸಿದ್ದರಾಮಯ್ಯ ಸಾಹೇಬರಿಗೆ ಬಿಟ್ಟುಕೊಟ್ಟು ನಿಮ್ಮ ಕ್ಷೇತ್ರಕ್ಕೆ ನಾನೇ ನಿಲ್ಲುತ್ತೆನೆ ನನ್ನನ್ನು ಆರಿಸಿ ತನ್ನಿ ಎಂದು ವ್ಯಂಗ್ಯ ಮಾಡಿದ ಶಾಸಕ ಜಮೀರ್ ಕೈ ಹಿಡಿದ ಬಾದಾಮಿ ಮಾತ್ರ ಮರೆತಿಲ್ಲ. ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರು ಮೊದಲು ಬಾದಾಮಿಯಿಂದಲೇ ಸ್ಪರ್ಧೇ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಕಾಲ್ನಡಿಗೆ ನಡೆಸಿದ ಅವರು ನಿರ್ಮಾಣಗೊಳ್ಳುತ್ತಿರುವ ರಾಯಣ್ಣನ ಮೂರ್ತಿ ಹಾಗೂ ಕಟ್ಟಡ ವಿಕ್ಷಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಯಕ್ಕಪ್ಪನವರ, ಲಾಲಸಾಬಅಜ್ಜ ಜಾಲಿಹಾಳ, ಬಾಬು ದಾಶ್ಯಾಳ, ಈರನಗೌಡ ಕರಿಗೌಡ್ರ, ಸಣ್ಣಬೀರಪ್ಪ ಪೂಜಾರ, ಹನಮಂತ ನರಗುಂದ, ನಾಗಪ್ಪ ಅಡಪಟ್ಟಿ, ಹನಮಂತ ಸನ್ನಪ್ಪನವರ, ಶಶಿ ಉದಗಟ್ಟಿ, ಬೀರಪ್ಪ ಪೆಂಟಿ, ಭೀಮಸಿ ಹೊರಕೇರಿ, ಕರಿಗೌಡ ಮುಷ್ಟಿಗೇರಿ, ಶೇಖಪ್ಪ ಪವಾಡಿನಾಯ್ಕರ್, ಅಶೋಕ, ಮಹಾಂತೇಶ, ನಭಿ ಅವಟಿ, ಚೇತನ್, ಸಾಧೀಕ್, ಶರೀಫ್, ಅಸ್ಲಾಮ್, ಮುರ್ತುಜ್, ಇಮ್ಮನ್, ಮಹಮ್ಮದ್, ರಾಜೇಸಾಬ ಸೇರಿದಂತೆ ನೂರಾರು ಕಾರ್ಯಕರ್ತರು ಗ್ರಾಮಸ್ಥರು ಇದ್ದರು.