ಸಿದ್ದರಾಮಯ್ಯ ಅವರನ್ನು ಮುಗಿಸಲಿ ಎಂದರೇ ಏನರ್ಥ

Advertisement

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಚುನಾವಣೆ ಟಿಪ್ಪು ಹಾಗೂ ಸಾವರ್ಕರ್ ಚುನಾವಣೆ ಎಂದು ಬಿಜೆಪಿಯವರು ಬರೆದುಕೊಳ್ಳಲಿ, ಜನರು ಈ ಕುರಿತು ತಿರ್ಮಾಣ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸಿದ್ದರಾಮಯ್ಯ ಅವರನ್ನು ಮುಗಿಸಲಿ ಎಂದರೇ ಏನರ್ಥ. ಒಬ್ಬ ಸಚಿವನಾಗಿ ಈ ರೀತಿಯ ಹೇಳಿಕೆ ಕೊಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಇನ್ನೂ ಈ ಹೇಳಿಕೆ ಕುರಿತು ನಾನು ದೂರು ಕೊಡುವುದಿಲ್ಲ. ಬದಲಾಗಿ ಪೋಲಿಸರು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಟಿಪ್ಪುವನ್ನು ಮುಗಿಸಿದ ಹಾಗೇ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಏನರ್ಥ. ಈ ಬಗ್ಗೆ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮಾತನಾಡಲಿ ಎಂದು ಒತ್ತಾಯಿಸಿದರು.
ಈ ಬೆಳೆವಣಿಗೆಗಳನ್ನು ನೋಡಿದರೇ ಬಿಜೆಪಿಯ ಸಂಸ್ಕೃತಿ ಹೊಡಿ, ಬಡಿ, ಕಡಿ ಎಂಬುದು ಗೊತ್ತಾಗುತ್ತದೆ. ಮಹಾತ್ಮ ಗಾಂಧೀಜಿ ಅವರನ್ನೇ ಕೊಂದವರು ಇವರು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಚರ್ಚೆ ಆಗಬೇಕಿರೋದು ಅಭಿವೃದ್ಧಿ, ರೈತರ, ಬಡವರ, ದಲಿತರ, ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಚರ್ಚೆ ಅಗಬೇಕು. ಅದನ್ನು ಬಿಟ್ಟು ಪ್ರಜೆಗಳಿಗೆ ರಕ್ಷಣೆ ಕೊಡಬೇಕಾದವರೇ ಈ ರೀತಿಯ ಹೇಳಿಕೆ ಕೊಡೋದು ಎಷ್ಟರಮಟ್ಟಿಗೆ ಸರಿ. ಹೀಗಾಗಿ ಟಿಪ್ಪು ವರ್ಸಸ್ ಸಾವರ್ಕರ್ ನಡುವೆ ಚುನಾವಣೆ ನಡೆಯಲಿ ಎಂದು ಬಿಜೆಪಿಯವರು ಪ್ರಣಾಳಿಕೆಯಲ್ಲಿ ಬರೆದುಕೊಳ್ಳಲಿ ಎಂದು ಹರಿಹಾಯ್ದರು.