ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ

Dhanuska
Advertisement

ಶ್ರೀಲಂಕಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಧನುಷ್ಕ ಗುಣತಿಲಕ ಅವರನ್ನು ಆಸ್ಟ್ರೇಲಿಯಾದ ಪೊಲೀಸರು ಭಾನುವಾರ ಮುಂಜಾನೆ ಬಂಧಿಸಿದ್ದಾರೆ. ಅತ್ಯಾಚಾರದಂತಹ ಗಂಭೀರ ಆರೋಪ ಎದುರಾಗಿದ್ದು,
“ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಷನ್ ಮೂಲಕ ಮಹಿಳೆ ಒಬ್ಬರು ಆರೋಪಿಯನ್ನು ಭೇಟಿಯಾಗಿದ್ದಾರೆ. ನವೆಂಬರ್‌ 2ರಂದು ಆರೋಪಿ ಮಳೆಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ,” ಎಂದು ನ್ಯೂ ಸೌತ್‌ ವೇಲ್ಸ್‌ ಪೊಲೀಸ್‌ ಇಲಾಖೆ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
“ಬಂಧಿತ ಶ್ರೀಲಂಕಾ ತಂಡದ ಕ್ರಿಕೆಟಿಗ ಧನುಷ್ಕ ಗುಣತಿಲಕ ಅವರನ್ನು ಸಿಡ್ನಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅವರ ವಿರುದ್ಧ ಅತ್ಯಾಚಾರ ಸಂಬಂಧ ನಾಲ್ಕು ದೂರು ದಾಖಲಿಸಲಾಗಿದೆ. ಈ ಬಗ್ಗೆ ಶ್ರೀಲಂಕಾ ಬೇಲ್‌ ನೀಡಲು ನಿರಾಕರಿಸಿದ್ದು, ಬೇಲ್‌ ನೀಡಲು ಪ್ಯಾರಾಮಾಟ್ಟ ಬೇಲ್‌ ಕೋರ್ಟ್‌ಗೆ ಹಾಜರಾಗಲು ನಿರಾಕರಿಸಿದೆ,” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.