ಸಿಎಂ ಎದುರು ಅಭ್ಯರ್ಥಿ ಬದಲಿಸಿದ ಕಾಂಗ್ರೆಸ್

Advertisement

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ.
ನಿನ್ನೆಯಷ್ಟೇ ಕಾಂಗ್ರೆಸ್‌ ಬಿಡುಗಡೆ ಮಾಡಿದ್ದ ನಾಲ್ಕನೇ ಪಟ್ಟಿಯಲ್ಲಿ ಮಹಮ್ಮದ ಯೂಸುಫ್‌ ಸವಣೂರು ಅವರ ಹೆಸರನ್ನು ಘೋಷಿಸಲಾಗಿತ್ತು. ಆದರೆ, ಇಂದು ಇದ್ದಕ್ಕಿದ್ದಂತೆ ಕೈ ನಾಯಕರು ಅಭ್ಯರ್ಥಿ ಬದಲಿಸಿದ್ದು ಯಾಸೀರ್‌ ಅಹ್ಮದ್‌ಖಾನ್‌ ಪಠಾಣ ಅವರ ಹೆಸರನ್ನು ತನ್ನ ಐದನೇ ಪಟ್ಟಿಯಲ್ಲಿ ಘೋಷಿಸಿದೆ.
ಈ ಮೊದಲು ಘೋಷಿಸಿದ್ದ ಸವಣೂರು ಅವರು ಹುಬ್ಬಳ್ಳಿಯವರಾಗಿರುವುದರಿಂದ ಶಿಗ್ಗಾಂವಿ ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಒಂದಿಷ್ಟು ಅಪಸ್ವರ ಕೇಳಿಬಂದಿತ್ತು. ಆದರೆ, ಇವತ್ತು ಯಾಸೀರ್‌ ಅಹ್ಮದ್‌ಖಾನ್‌ ಪಠಾಣ ಹೆಸರನ್ನು ಘೋಷಿಸಿ ಅಚ್ಚರಿ ಮೂಡಿಸಿದೆ.