ಸಿಎಂ ಆಗುವ ಟೈಮ್​ನ​ಲ್ಲಿ ಪಲ್ಟಿ ಹೊಡೆಸಿದ್ರು: ಪರಮೇಶ್ವರ್‌

G Parmeshwar
Advertisement

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನರು ನನ್ನನ್ನು ಎರಡು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರು. ಆದ್ರೆ ಒಳ್ಳೆಯ ಟೈಮ್​ನ​ಲ್ಲಿ ಪಲ್ಟಿ ಹೊಡೆಸಿದ್ರು. ಇದರಿಂದಾಗಿ ನಾನು ಮುಖ್ಯಮಂತ್ರಿಯಾಗುವುದು ತಪ್ಪಿದಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ನಡೆದ ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013ರಲ್ಲಿ ಒಂದೇ ಒಂದು ಮತದಲ್ಲಿ ಗೆದ್ದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು. ಆದ್ರೆ ನಂಗೂ ಹಣೆಬರಹ ಇರಬೇಕಲ್ಲಾ, ಕೇವಲ ನಿಮ್ಮ ಬಗ್ಗೆ ಹೇಳಿದ್ರೆ ಆಗುವುದಿಲ್ಲ. ಹಾಗಾಗಿ, ಈ ಕ್ಷೇತ್ರದ ಜನತೆಗೆ ನನ್ನ ಕೈಲಾದಷ್ಟು ಕೆಲಸ ಮಾಡಿದ ಆತ್ಮ ತೃಪ್ತಿ ನನಗಿದೆ ಎಂದರು