ಸಾಲ ಬಾಧೆ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Advertisement

ಹಾವೇರಿ: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ‌ಜಿಲ್ಲೆಯ ಸವಣೂರು ತಾಲೂಕಿನ ತಾಲ್ಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡವರನ್ನು ಒಂದೇ ಕುಟುಂಬದ ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22)ಎಂದು‌ ತಿಳಿದು ಬಂದಿದೆ.

ಹನುಮಂತಗೌಡ ಪಾಟೀಲ ಸಾಲಮಾಡಿ ಮಗಳ ಮದುವೆಯನ್ನ ಮಾಡಿದ್ದರು ಎನ್ನಲಾಗಿದೆ. ಸಾಲಬಾಧೆ ತಾಳಲಾರದೆ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ತನ್ನಿಂದ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನೊಂದು ಮಗಳು ನೇತ್ರ ಆತ್ಮಹತ್ಯೆಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹನುಮಂತಗೌಡ ಪಾಟೀಲ ಸುಮಾರು 25 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗುತ್ತಿದೆ.
ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.