ಸಾಕವಳ್ಳನ್ನು ಕೈ’ ಬಿಟ್ಟ ಹೈಕಮಾಂಡ್

Advertisement

ತೇರದಾಳ: 15 ವರ್ಷಗಳ ಕಾಲ ತೇರದಾಳ ವಿಧಾನಸಭಾ ಕ್ಷೇತ್ರ ಹುಟ್ಟಿದಾಗಿನಿಂದಲೂ ಮೂರು ಬಾರಿ ಸತತ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು, ತೇರದಾಳ ಕ್ಷೇತ್ರದ ಜನತೆ `ಸಾಕವ್ವ’ಳನ್ನು ಸಾಕಿತ್ತು. ಇದೀಗ ಹೈಕಮಾಂಡ್ ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಮಹಾಲಿಂಗಪೂರದ ಸಿದ್ದಣ್ಣ ಕೊಣ್ಣೂರರಿಗೆ ಟಿಕೆಟ್ ನೀಡಿ, ಮತದಾರರ ಕೂಗಾಗಿದ್ದ ಸ್ಥಳೀಯ ಅಭ್ಯರ್ಥಿಗೆ ಸಹಮತ ತೋರುವಲ್ಲಿ ಕಾರಣವಾಗಿದೆ.
2008 ರಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದ ಉಮಾಶ್ರೀ, ನಂತರದ ಚುನಾವಣೆಯಾದ 2013 ರಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸಚಿವ ಸ್ಥಾನಗಿಟ್ಟಿಸಿಕೊಂಡಿದ್ದರು. ನಂತರ 2018 ರಲ್ಲಿ ಮತ್ತೊಮ್ಮೆ ಮೂರನೇ ಬಾರಿ ಕಣಕ್ಕಿಳಿದಿದ್ದ ಮಾಜಿ ಸಚಿವೆ ಭಾರಿ ಅಂತರದಲ್ಲಿ ಹಾಲಿ ಶಾಸಕ ಸಿದ್ದು ಸವದಿ ವಿರುದ್ಧ ಸೋಲುನಬೇಕಾಯಿತು. ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಯಶಸ್ವಿ ಕಂಡಿದೆಯಾದರೂ ಸ್ಥಳೀಯ ಅಭ್ಯರ್ಥಿ ಆಕಾಂಕ್ಷಿಗಳಾಗಿರುವ ಡಾ. ಪದ್ಮಜಿತ ನಾಡಗೌಡ ಪಾಟೀಲ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಎ.ಆರ್. ಬೆಳಗಲಿ, ನೇಕಾರ ಸಮುದಾಯದ ಡಾ. ಎಂ.ಎಸ್. ದಡ್ಡೇನವರ ಶತಾಯ-ಗತಾಯ ಪೈಪೋಟಿ ನಡೆಸಿದ್ದರು. ಹೈಕಮಾಂಡ್‌ನ ಈ ನಿರ್ಧಾರದಿಂದ ಇವರ ನಡೆ ನಿಗೂಢವಾಗಿದ್ದು, ಬೆಂಬಲಿಗರ ಸೂಚನೆಯಂತೆ ಮುನ್ನಡೆಯುವದಾಗಿ ಸಂದೇಶ ನೀಡಿದ್ದಾರೆ.