ಚಿತ್ರದುರ್ಗ: ಸಹೋದರ ತೇಜಸ್ವಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಒಂದು ವೇಳೆ ಟಿಕೆಟ್ ಸಿಕ್ಕರೆ ಚನ್ನಗಿರಿ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಿಲ್ಲ ಇದರ ಬದಲಿಗೆ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಪಟೇಲ್ ಹೇಳಿದರು.
ಒಂದೇ ಮನೆಯಲ್ಲಿ ಇಬ್ಬರು ಸ್ಪರ್ಧೆ ಮಾಡುವುದು ಸರಿ ಅಲ್ಲ. ಅದಕ್ಕಾಗಿ ಸಹೋದರನಿಗೆ ಟಿಕೆಟ್ ಸಿಕ್ಕರೆ ಚನ್ನಗಿರಿ ಕ್ಷೇತ್ರವನ್ನು ಬಿಟ್ಟು ಕೊಡುತ್ತೆನೆ. ನೇರವಾಗಿ ಅವರ ಪರವಾಗಿ ಪ್ರಚಾರ ಮಾಡಲ್ಲ. ಮತದಾರರಿಗೆ ಇದ್ದುದರಲ್ಲಿ ತೇಜಸ್ವಿ ಉತ್ತಮ ಅವರಿಗೆ ಮತ ನೀಡುವಂತೆ ಹೇಳುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಹೋದರ ಸ್ಪರ್ಧೆ ಮಾಡಿದರೆ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೆನೆ. ಈಗಿನಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರು ಮಾಡಿಕೊಳ್ಳಲಾಗುವುದು ಎಂದರು.