‘ಸಹಾಯ ಬಡ್ಡಿ’ ಎದುರು ನೋಡುತ್ತಿರುವ ನೇಕಾರ

Advertisement

ರಾಜ್ಯದ ನೇಕಾರರಿಗೆ ಒಂದಿಲ್ಲ ಒಂದು ಕಂಟಕ ಎದುರಾಗುತ್ತಿರುವದು ಹೊಸದೇನಲ್ಲ. ಕಳೆದೊಂದು ದಶಕದಿಂದ ನೇಕಾರರ ಸಾಲದ ಮೇಲಿನ ರಿಯಾಯ್ತಿ ಬಡ್ಡಿಯಾಗಿ 2 ಲಕ್ಷದವರೆಗೆ ಶೇ.1 ಹಾಗು 5 ಲಕ್ಷದವರೆಗೆ ಶೇ.3 ಬಡ್ಡಿ ಆಕರಣೆಯಲ್ಲಿರುವ ಸಾಲದ ಬಡ್ಡಿ ಸರ್ಕಾರದಿಂದ ವಿಳಂಬವಾಗುತ್ತಿರುವದರಿಂದ `ಸಹಾಯ ಬಡ್ಡಿ’ ವಾಪಸ್‌ಗೆ ಲಕ್ಷಾಂತರ ನೇಕಾರರು ಬಕಪಕ್ಷಿಯಂತೆ ಕಾಯುತ್ತಿರುವದು ಸೋಜಿಗದ ಸಂಗತಿ.

ವಿಳಂಬಕ್ಕೆ ಕಾರಣ
ರಾಜ್ಯದ ನೇಕಾರರು ಬಡ್ಡಿ ಸಹಾಯಕ್ಕಾಗಿ ಸರ್ಕಾರದ ಯೋಜನೆಯಡಿ ಸಾಲ ಪಡೆಯಬೇಕಾದರೆ ಕಡ್ಡಾಯವಾಗಿ ಜವಳಿ ಇಲಾಖೆಯ ಪೂವಾರ್ನುಮತಿ ಪಡೆದು ಆಯಾ ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕೆಂಬ ಆದೇಶವಿದೆ.

ಹೀಗಿದಾಗ್ಯೂ 2017-18 ರಲ್ಲಿ ಇದೇ ಘಟನೆ ಮರುಕಳಿಸಿದ ಸಂದರ್ಭ ಸರ್ಕಾರದ ಜನಪ್ರತಿನಿಧಿಗಳ ಮಧ್ಯಸ್ಥಿಕೆಯಿಂದ ಸರಳೀಕರಣಗೊಳಿಸಿ ಸಹಾಯ ಬಡ್ಡಿ ಬಿಡುಗಡೆ ಮಾಡಿತ್ತು. ಇದೇ ಪ್ರಸಂಗ ಮತ್ತೇ ಬಂದಿದ್ದು, ಕಳೆದ 2018-19 ರಿಂದ 2021-22 ವರೆಗೆ 4 ವರ್ಷಗಳಿಂದ ಸುಮಾರು 200 ಕೋಟಿ ರೂ.ಗಳಷ್ಟು ಸಹಾಯ ಬಡ್ಡಿ ದೊರಕದ ಕಾರಣ ನೇಕಾರರು ಸಂಪೂರ್ಣ ಬಡ್ಡಿಯನ್ನು ಸಾಲ ಪಡೆದಿರುವ ಸಹಕಾರಿ ಸಂಘ ಹಾಗು ಬ್ಯಾಂಕ್‌ಗಳಿಗೆ ಭರಣಾ ಮಾಡಿದ್ದಾರೆ.

ಇಲ್ಲಿಯವರೆಗೂ ಬಾರದ ಕಾರಣ ಹೆಚ್ಚಿನ ಬಡ್ಡಿ ತುಂಬಿರುವ ನೇಕಾರರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವಲ್ಲಿ ಕಾರಣವಾಗಿದೆ.

ಹೊಣೆಗಾರರು ಯಾರು?

ನೇಕಾರರು ಕಳೆದ ನಾಲ್ಕು ವರ್ಷಗಳಿಂದ ಸಹಾಯ ಬಡ್ಡಿ ಮನ್ನಾವಾಗದೇ ಇರಲು ಹೊಣೆಗಾರರು ಯಾರೆಂದು ಪರಿಶೀಲಿಸಿದಾಗ, ಸಾಲ ನೀಡುವ ಸಂಘ ಹಾಗು ಪಡೆಯುವ ನೇಕಾರನೇ ನೇರ ಕಾರಣರಾಗಿದ್ದಾರೆ. ಸರ್ಕಾರದ ಅಧಿಸೂಚನೆಯಿದ್ದರೂ ನಿಯಮ ನಿರ್ಲಕ್ಷ್ಯದಿಂದ ಸದ್ಯ ಗೋಳಾಡುವಲ್ಲಿ ಕಾರಣವಾಗಿದೆ. ನೇಕಾರ ಸಹಕಾರಿ ಸಂಘಗಳಿಂದ ಪಡೆದಿರುವ ಸಾಲಗಾರರಿಗೆ ಸಹಾಯ ಬಡ್ಡಿ ಮನ್ನಾ ಪ್ರಸಕ್ತ ಸಾಲಿನವರೆಗೂ ಬಿಡುಗಡೆಗೊಂಡಿದೆ. ಪೂರ್ವಾನುಮತಿ ಪತ್ರವಿರದಿರುವ ನೇಕಾರರು ಪರದಾಡುವಂತಾಗಿದೆ. ಸಿಸಿ ಸಾಲವೂ ಸುಲಭ

ನೇಕಾರರಲ್ಲಿ ಸೀರೆಗಳ ಮಾರಾಟ ಹಾಗು ಖರೀದಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಪಡೆದಿರುವ ಕ್ಯಾಶ್ ಕ್ರೆಡಿಟ್(ರೋಖ ಪತ್ತಿನ ಸಾಲ) ಇದೀಗ ಸರಳೀಕರಣಗೊಂಡಿದ್ದು, 7 ಕೋಟಿ ರೂ.ಗಳಷ್ಟಿರುವ ಸಾಲಗಾರರು ಶೀಘ್ರವೇ ರಿಲೀಫ್ ಪಡೆಯುವ ಸಂದೇಶವನ್ನು ಸರ್ಕಾರ ನೀಡಿದೆ.