ಸವದಿ ಬಿಜೆಪಿ ಬಿಟ್ಟಿದ್ದು ಒಳ್ಳೆದಾಯ್ತು

ರಮೇಶ
Advertisement

ಅಥಣಿ : ಸವದಿ ಕಾಂಗ್ರೆಸ್ ಸೇರುತ್ತಾನೆಂದು ನನಗೆ ಮೊದಲೇ ಗೊತ್ತಿತ್ತು. ನನಗೆ ಮಂತ್ರಿ ಸ್ಥಾನ ಇಲ್ಲದಿದ್ದರೂ ನಾನು ಪಕ್ಷದಲ್ಲೇ ಉಳಿದೆ. ಇವತ್ತು ನನಗೆ ತುಂಬಾ ಸಂತೋಷವಾಗಿದೆ, ಉದ್ದ ಅಂಗಿ ಹಾಕಿರುವನು ಹೊರಗೆ ಹೋಗಿದ್ದಾನೆ. ಈ ಬಾರಿಯೂ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದರು.
ಅಥಣಿಯ ಶಿವಣಗಿ ಸಾಂಸ್ಕ್ರತಿಕ ಭವನದಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷ ಉಪ ಮುಖ್ಯಮಂತ್ರಿ ಆಗಿದ್ದರೂ ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲ ಅವನು, ಕುತಂತ್ರಿ ಡಿಕೆಶಿ ಇವನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡ ಹೋಗಿದ್ದಾನೆ. ಇನ್ನು ಮುಂದೆ ನಾನು ಅಥಣಿಯಲ್ಲಿ ಹಾಗೂ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇರುತ್ತೇನೆ. ನೀವು ನನಗೆ ಶಕ್ತಿ ಆಗಬೇಕು ಉದ್ದ ಅಂಗಿಯ ಅವನನ್ನು ಸೋಲಬೇಕು. ಬಿಜೆಪಿ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ ಅದನ್ನು ನಾನು ಉಳಿಸಿಕೊಳ್ಳಬೇಕಿದೆ. ತಾವು ಯಾವುದೇ ದಬ್ಬಾಳಿಕೆಗೆ ಅಂಜಬೇಡಿ ಎಂದರು.
ಇಷ್ಟು ದಿನ ಸವದಿ ನಮ್ಮ ಪಕ್ಷದಲ್ಲಿ ಇದ್ದರು ಎಂದು ನಾನು ಸುಮ್ಮನಿದ್ದೇ. ಇನ್ಮೇಲೆ ನಾನು ಇಲ್ಲೇ ಇರುತ್ತೇನೆ. ತಾಲೂಕಿನ ಕೆಲವು ಸಹಕಾರಿ ಸೊಸೈಟಿಯಲ್ಲಿ ಅಕ್ರಮವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಆ ಅಕ್ರಮಗಳನ್ನು ಪರಿಶೀಲನೆ ಮಾಡಲಾಗುವುದು, ಕಳೆದ ಉಪಚುನಾವಣೆ ಸಮಯದಲ್ಲಿ ನಾಟಕ ಮಾಡಿದ್ದಾನೆ. ಆದರೆ ಈ ಬಾರಿ ಏನು ನಡೆಯುವುದಿಲ್ಲ ಎಂದ ಅವರು, ಅವನು ಹೋಗಿರುವುದು ಛಲೋ ಆಗಿದೆ. ಅಥಣಿ ಕಾಗವಾಡ ಅಭ್ಯರ್ಥಿ ಗೆಲ್ಲಬೇಕು ನಿಮ್ಮ ಪರವಾಗಿ ನಾನು ಇದ್ದೇನೆ ಎಂದು ಹೇಳಿದರು.
ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ನಾನು ಬಿಜೆಪಿಗೆ ಸೇರ್ಪಡೆಯಾಗುವಾಗಲೇ ಮುಂದಿನ‌ ಚುನಾವಣೆಯಲ್ಲೂ ನನಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರ ಜೊತೆಗೆ ಮಾತನಾಡಿಯೆ ಸ್ಪರ್ಧಿಸಲು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ವಿ, ಆಗಿನ ಸಂದರ್ಭದಲ್ಲಿ ನಮಗೆ ಸಮುದ್ರದ ನಟ್ಟ ನಡು ನೀರಲ್ಲಿ ಹುಟ್ಟ ಇಲ್ಲದೆ ಪ್ರಯಾಣ ಮಾಡಿದ ಹಾಗೆ ಆಯ್ತು, ಅನಂತರ ಉಪಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ರಾಜ್ಯಮಟ್ಟದ ನಾಯಕರು ಬಂದು ಉಪಚುನಾವಣೆಯಲ್ಲಿ ಧೈರ್ಯ ಕೊಟ್ಟು ತಮ್ಮೆಲ್ಲರ ಸಹಕಾರದಿಂದ ನನ್ನನ್ನು ಗೆಲ್ಲಿಸಿದ್ದಿರಿ ಎಂದರು. ಈ ವೇಳೆ ಉಮೇಶರಾವ ಬೊಂಟೋಡಕರ, ಡಾ ರವಿ ಸಂಕ, ಸಿದ್ದಪ್ಪ ಮುದಕನ್ನವರ, ಕೆ ಎಲ್ ಕುಂದರಗಿ ಸೇರಿದಂತೆ ಇತರರು ನೆರೆದಿದ್ದರು.