ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಲೇಹರ್ ಸಿಂಗ್ ಪತ್ರಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದು, ಸೂಕ್ಷ್ಮ ವಿಚಾರವನ್ನು ಮಾತಾಡುವಾಗ ಎಚ್ಚರ ವಹಿಸಬೇಕು ಎಂದು ಕಿಡಿ ಕಾರಿದ್ದಾರೆ ಎನ್ನಲಾಗಿದೆ.
ಹೊರರಾಜ್ಯಕ್ಕೆ ಪ್ರಕರಣ ವರ್ಗಾಯಿಸಿ ಎನ್ನುವ ಲೇಹರ್ ಸಿಂಗ್ ಹೇಳಿಕೆ ಬಗ್ಗೆ ಯಡಿಯೂರಪ್ಪ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದು, ಶ್ರೀಗಳ ವಿಚಾರದಲ್ಲಿ ಎಚ್ಚರಿಕೆ ನಿಲುವು ಬೇಕು. ಸುಖಾ ಸುಮ್ಮನೆ ತನಿಖೆ ಬಗ್ಗೆ ಸಂಶಯಪಟ್ಟರೆ ತಪ್ಪು ಸಂದೇಶ ಹೋಗುತ್ತದೆ. ತನಿಖೆ ಆಗುವವರೆಗೆ ಈ ರೀತಿ ಅಭಿಪ್ರಾಯ ಹೊರಹಾಕೋದು ತಪ್ಪು. ಸರ್ಕಾರ ಶ್ರೀಗಳ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಸಮುದಾಯ ತಪ್ಪು ತಿಳಿಯುತ್ತದೆ. ಮೊದಲು ತನಿಖೆ ಆಗಲಿ, ಆನಂತರ ಏನು ಮಾಡಬೇಕು ಎಂದು ಯೋಚಿಸೋಣ ಎಂದಿದ್ದಾರೆ ಎನ್ನಲಾಗಿದೆ.