ಬೆಳಗಾವಿ : ಕುಡಿದ ಅಮಲಿನಲ್ಲಿ ಮಾಡಿದ ಅವಗಡದಿಂದ ಪಾರಾಗಲು ಸುಳ್ಳು ಹೇಳಲು ಹೋದ ಸರ್ಕಾರಿ ವಾಹನ ಚಾಲಕ ಸಿಕ್ಕು ಬಿದ್ದು ಫಜೀತಿಗೀಡಾಡ ಘಟನೆ ಇಂದು ಬೆಳಕಿಗೆ ಬಂದಿದೆ.
ಚಾಮರಾಜಪೇಟೆಯ ಅಗ್ರಿಕಲ್ಟರಲ್ ರೂರಲ್ ಡೆವೆಲೆಪ್ಮೆಂಟ್ ಬ್ಯಾಂಕ್ ವಾಹನದ ಚಾಲಕ ಚೇತನ ಎನ್. ವಿ. ಎಂಬಾತನೇ ಸಿಕ್ಕಿ ಬಿದ್ದವ. ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿನ ಸಿಸಿಟಿವಿ ಸತ್ಯವನ್ನು ಹೊರಗೆ ಹಾಕಿದ್ದರಿಂದ ಪೊಲೀಸರು ನಿಟ್ಟುಸಿರು ಬಿಡುವಂತಾಯಿತು,
ಕಳೆದ ದಿ. 14 ರಂದು ಅಧಿವೇಶನ ಕಾರ್ಯದ ನಿಮಿತ್ತ ಬ್ಯಾಂಕ್ನ ಬೋಲೇರೊ ವಾಹನ ತೆಗೆದುಕೊಂಡು ಬರುತ್ತಿದ್ದಾಗ ಸುವರ್ಣ ವಿಧಾನಸೌಧದ ಹತ್ತಿರ ಕೆಲವರು ಕನರ್ಾಟಕ ಸಕರ್ಾರ ಎಂದಿದ್ದನ್ನು ಗಮನಿಸಿ ಕಲ್ಲು ಹೊಡೆದರು. ಅಷ್ಟೇ ಅಲ್ಲ ತಮಗೆ ಮರಾಠಿ ಭಾಷೆಯಲ್ಲಿ ನಿಂದಿಸಿ ಜೀವ ಬೆದರಿಕೆ ಹಾಕಿದರು ಎಂದು ಹಿರೇಬಾಗೇವಾಡಿ ಪೊಲೀಸರಿಗೆ ದೂರು ನೀಡಿದ್ದನು,
ಈ ದೂರನ್ನು ದಾಖಲು ಮಾಡಿಕೊಂಡ ಪೊಲೀಸರು ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ವಿಚಾರಣೆ ನಡೆಸಿದರು.
ಆದರೆ ಪೊಲೀಸರು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಆರೋಪಿ ಚಾಲಕನು ಬೆಂಗಳೂರಿನಿಂದ ಬೆಳಗ್ಗೆ ಸುಮಾರು 07.45 ಗಂಟೆಗೆ ಬಿಟ್ಟು ಬೆಳಗಾವಿ ಕಡೆಗೆ ಬರುವಾಗ ಸಾಯಂಕಾಲ 4.30ಕ್ಕೆ ಶಿಗ್ಗಾಂವ ತಾಲೂಕಿನ ತಡಸ ಗ್ರಾಮಕ್ಕೆ ಬಂದು ಅಲ್ಲಿಬಾರ್ನಲ್ಲಿ ವಿಪರೀತ ಸರಾಯಿ ಕುಡಿದು ಊಟ ಮಾಡಿ ನಂತರ ಅಮಲನಲ್ಲಿ ಮುಂದೆ ಪ್ರಯಾಣ ಬೆಳೆಸಿದ್ದನು. ಅಲ್ಲಿಂದ
ಧಾರವಾಡ ಮತ್ತು ಹಿರೇಬಾಗೇವಾಡಿ ಟೋಲ್ ನಾಕಾ ಮಧ್ಯದಲ್ಲಿ ಆತನ ಬೊಲೇರೊ ವಾಹನದ ಮುಂದೆ ಸ್ಟೀಲ್
ಬಾರಗಳನ್ನು ತುಂಬಿಕೊಂಡ ಹೊರಟ ಟ್ರಕ್ಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಈತನ ವಾಹನದ ಮುಂದಿನ ಗ್ಲಾಸು ಒಡೆದಿದೆ ಎನ್ನುವುದು ಗೊತ್ತಾಗಿದೆ. ಈ ಗ್ಲಾಸ್ ಒಡೆದ ಬಗ್ಗೆ ಹಿರೇಬಾಗೇವಾಡಿ ಟೋಲ್ ನಾಕಾ ಸಿಸಿಟಿವಿ ಕ್ಯಾಮೆರಾದಲ್ಲಿ
ಸೆರೆಯಾಗಿರುತ್ತದೆ.
ಈ ಸಂದರ್ಭದಲ್ಲಿ ತನ್ನ ತಪ್ಪಿನಿಂದ ಬ್ಯಾಂಕಿನ ವಾಹನದ ಗ್ಲಾಸು ಒಡೆದಿದೆ ಅಂತಾ ಗೊತ್ತಾದರೆ ತನಗೆ
ಮೇಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸುವರೆಂದು ತಿಳಿದ ಚಾಲಕನು ನೈಜ ಘಟನೆಯನ್ನು ಮುಚ್ಚಿಟ್ಟು
ವಿನಾಕಾರಣ ಪೊಲೀಸ್ರಿಗೆ ಸುಳ್ಳು ದೂರನ್ನು ನೀಡಿ ಸಿಕ್ಕಿ ಹಾಕಿಕೊಂಡನು ಎಂದು ಗೊತ್ತಾಗಿದೆ..
ಇಲ್ಲಿ ಚಾಲಕ ಹೇಳಿದ ಹಾಗೆ ಯಾವುದೇ ವ್ಯಕ್ತಿಗಳು ಆತನ ವಾಹನದ ಗ್ಲಾಸ್ ಒಡೆದಿರುವುದಿಲ್ಲ.ಮತ್ತು ಮರಾಠಿ ಭಾಷೆಯಲ್ಲಿ ನಿಂದಿಸಿ ಜೀವ ಬೆದರಿಕೆ ಹಾಕಿರುವುದಿಲ್ಲ ಎನ್ನುವುದು ತನಿಖೆಯಿಂದ ಸ್ಪಷ್ಟವಾಗಿದೆ. ಆದ್ದರಿಂದ
ಸುಳ್ಳು ದೂರು ನೀಡಿದವಾಹನ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಸಿದ್ದಾರೆ