ಸನ್ಮಾನ ಸ್ವೀಕರಿಸದೇ ತೆರಳಿದ ಹರಿಪ್ರಸಾದ

Advertisement

ಹಾವೇರಿ: ಆರೋಪ-ಪ್ರತ್ಯಾರೋಪ ಬಳಿಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಗೌರವ ಸ್ವೀಕರಿಸದೇ ತೆರಳಿದ ಪ್ರಸಂಗ ಜರುಗಿತು.
ಬಿ.ಕೆ. ಹರಿಪ್ರಸಾದ ಅವರು ಕಸಾಪ ನಡೆಯನ್ನು ಟೀಕಿಸಿದ್ದರು. ಇದಕ್ಕೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಪ್ರತ್ಯುತ್ತರ ನೀಡಿದ್ದರು.
ಬಳಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಗಣ್ಯಮಾನ್ಯರಿಗೆ ಗೌರವ ಸಮರ್ಪಣೆ ನಡೆಯುತ್ತಿದ್ದಾಗ ವೇದಿಕೆಯಿಂದ ನಿರ್ಗಮಿಸುವ ಮೂಲಕ ಹರಿಪ್ರಸಾದ ತಮ್ಮ ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ.