ಬೆಂಗಳೂರು: ಬೆಂಗಳೂರಿನ ಪ್ರವಾಹ ಪ್ರಸ್ತಾಪಕ್ಕೆ ಕಾಂಗ್ರೆಸ್ ಸಜ್ಜಾಗಿದ್ದು, ಸದನದಲ್ಲಿ ಒತ್ತುವರಿ ಕದನ ಗ್ಯಾರೆಂಟಿನಾ..?ಸೋಮವಾರದಿಂದ ಒತ್ತುವರಿ ಫೈಟ್ ನಡೆಯುತ್ತಾ..?ಮಹಾ ಮಳೆಗೆ ಪೂರ್ವ ಬೆಂಗಳೂರು ಮುಳುಗಿತ್ತು, ರಾಜಕಾಲುವೆ ಒತ್ತುವರಿಯೇ ಇದ್ಕೆಲ್ಲಾ ಕಾರಣ, ಬಿಜೆಪಿ ಸರ್ಕಾರ ಒತ್ತುವರಿ ತೆರವು ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಒತ್ತುವರಿ ಮಾಡಿರೋದೇ ಕಾಂಗ್ರೆಸ್ ನಾಯಕರು ಎಂದಿದ್ದ ಬಿಜೆಪಿ, ಒತ್ತುವರಿ ಪ್ರಸ್ತಾಪ ಮಾಡಿದ್ರೆ ಕಾಂಗ್ರೆಸ್ ಮೇಲೆ ಮುಗಿ ಬೀಳಲಿದೆ . ಸಿದ್ದರಾಮಯ್ಯ ರಾಜಕಾಲುವೆಗಳ ಒತ್ತುವರಿ ತೆರವು ಮಾಡಿಲ್ಲ ಎಂದಿದ್ದಾರೆ. ಮಹದೇವಪುರ, ಬೊಮ್ಮನಹಳ್ಳಿ,ಕೆ.ಆರ್.ಪುರದಲ್ಲಿ ಒತ್ತುವರಿ ಹೆಚ್ಚಾಗಿದೆ, ಸಿದ್ದು ಸರ್ಕಾರದ ವಿರುದ್ಧ ಒತ್ತುವರಿ ಅಸ್ತ್ರ ಬೀಸಲು ಸಜ್ಜಾಗಿದ್ದು, ಒತ್ತುವರಿ ಹಿಂದೆ ಯಾರಿದ್ದಾರೆ ಹೇಳೋಕೆ ನಾವ್ ರೆಡಿ ಎನ್ನುತ್ತಿದೆ ಬಿಜೆಪಿ.