ಚಿತ್ರದುರ್ಗ: ಮಾಜಿ ಸಚಿವ ಹೆಚ್.ಕೆ ಪಾಟೀಲರೊಂದಿಗೆ ಖುದ್ದು ಮಾತನಾಡಿ ಕೆಲವು ವಿಚಾರ ಮತ್ತು ಸತ್ಯಾಸತ್ಯತೆಗಳನ್ನು ಅವರಿಗೆ ವಿವರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಮುರುಘಾಮಠದ ಆವರಣದ ಹೆಲಿಪ್ಯಾಡ್‌ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಗಡಿ ವಿವಾದದ ಕುರಿತು ಕೇಂದ್ರ ಗೃಹ ಸಚಿವರು ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಬಾರದಿತ್ತು ಎಂಬ ಹೆಚ್.ಕೆ. ಪಾಟೀಲರ ಹೇಳಿಕೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.