ಸತತ ಮಳೆಗೆ ಮನೆಗೋಡೆ ಕುಸಿತ: ಒಂದೇ ಕುಟುಂಬದ ಮೂವರು ಸಾವು

Advertisement

ರಾಯಚೂರು: ಜಿಲ್ಲೆಯಾದ್ಯಂತ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮೂವರನ್ನ ಬಲಿ ಪಡೆದಿದೆ. ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಸತತ ಮಳೆಯಿಂದಾಗಿ ಮನೆ ಗೋಡೆ ಕುಸಿದು ಒಂದೇ ಮೂವರು ಸಾವನ್ನಪ್ಪಿದ್ದಾರೆ.

45 ವರ್ಷದ ಪರಮೇಶ ,‌ ಪರಮೇಶ್ ಪತ್ನಿ 39 ವರ್ಷದ ಜಯಮ್ಮ ಹಾಗೂ ಪರಮೇಶನ ತಮ್ಮನ ಮಗ ನಾಲ್ಕು ವರ್ಷದ ಭರತ್ ಮೃತದುರ್ದೈವಿಗಳು. ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದು ಅವಘಡ ನಡೆದಿದೆ.ಪರಮೇಶ ಹಾಗೂ ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕ ಭರತ್ ಮಾನ್ವಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯ ಮೃತಪಟ್ಟಿದ್ದಾನೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಮಾನ್ವಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.