ಬೆಳಗಾವಿ: ಕರ್ನಾಟಕ ವಕೀಲರ ರಕ್ಷಣಾ ಕಾಯಿದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವಂತೆ ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಸಿದ ವಕೀಲರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿ ಬೆಂಬಲ ಸೂಚಿಸಿದರು. ವಕೀಲರ ಬೇಡಿಕೆ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ಏತನ್ಮಧ್ಯೆ ಸತತ ಎರಡು ಗಂಟೆಯಿಂದ ಸುವರ್ಣ ಸೌಧದ ಮುಖ್ಯದ್ವಾರದ ಮುಂದೆ ವಕೀಲರ ಪ್ರತಿಭಟನೆ ಮುಂದುವರಿದಿದ್ದು, ಪ್ರತಿಭಟನಾ ಸ್ಥಳಕ್ಕೆ ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗ್ಯಯ್ಯ ಭೇಟಿ
ವಕೀಲರನ್ನು ಸಮಾಧಾನ ಪಡಿಸಲು ಮುಂದಾದರೂ, ಪೊಲೀಸ್ ಆಯುಕ್ತರ ಮಾತಿಗೂ ಬಗ್ಗದ ವಕೀಲರು ಸ್ಥಳಕ್ಕೆ ಮಾಧುಸ್ವಾಮಿ ಬರಲೇಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಮಾಧುಸ್ವಾಮಿ ವಿರುದ್ಧ ವಿಭಿನ್ನ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ ವಕೀಲರು, ಹತ್ತು ರೂಪಾಯಿ, ಐದು ರೂಪಾಯಿ ಎಂದು ಮಾಧುಸ್ವಾಮೀಯನ್ನು ಹರಾಜು ಹಾಕಿ ವಿಭಿನ್ನವಾಗಿ ಪ್ರತಿಭಟಿಸಿದರು.