ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆಗೆ ವಿರೋಧ: ಕಾರಿಗೆ ಮೊಟ್ಟೆ ಎಸೆತ

Advertisement

ಮಂಡ್ಯ: ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಕಾರಿಗೆ ಮೊಟ್ಟೆ ಎಸೆದ ಪ್ರಸಂಗ ನಡೆದಿದೆ. ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೆಆರ್ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದಿದ್ದಾರೆ.
ಕೆ ಆರ್ ಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಇಂದು ಪೂರ್ವಭಾವಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ನಾರಾಯಣಗೌಡ ಕಾಂಗ್ರೆಸ್‍ಗೆ ಬರ್ತೀನಿ ಅಂತಾ ಹೇಳ್ತಾ ಇದ್ದಾರೆ. ನೀವು ಇಲ್ಲಿ ಯಾತ್ರೆ ಅಂತಾ ಸಭೆ ಮಾಡ್ತಾ ಇದ್ದೀರಾ. ನಾರಾಯಣಗೌಡ ಟಿಕೆಟ್ ತಗೊಂಡರೆ ನೀವು ಹೆಂಗಸರ ಬಳಿ ಹೋಗಿ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಹೇಳುತ್ತಾ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ಬಳೆ ಕೊಟ್ಟಿದ್ದಾರೆ. ನಾರಾಯಣಗೌಡ ಕಾಂಗ್ರೆಸ್‍ಗೆ ಬಂದ್ರೆ ಪ್ರಜಾಧ್ವನಿ ಯಾತ್ರೆಗೆ ಕಲ್ಲು ಹೊಡೆಯುತ್ತೇವೆ. ನಾರಾಯಣಗೌಡ ಕಾಂಗ್ರೆಸ್‍ಗೆ ಬಂದರೆ ನಾವು ಸುಮ್ಮನೆ ಇರಲ್ಲ. ಅವರು ಕಾಂಗ್ರೆಸ್‍ಗೆ ಬರಬಾರದು ಎಂದು ಕಾರ್ಯಕರ್ತರು ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡರು.
ನಾರಾಯಣಗೌಡನ ವಿರುದ್ಧ ಇಷ್ಟು ವರ್ಷ ನಾವು ಹೋರಾಡಿದ್ದೇವೆ. ನಮ್ಮ ಕಾರ್ಯಕರ್ತರು ಅವನಿಂದ ಜೈಲಿಗೆ ಹೋಗಿದ್ದಾರೆ. ಈಗ ಅವನು ಪಕ್ಷಕ್ಕೆ ಬಂದ್ರೆ ಹೇಗ್ ಸೇರಿಸಿಕೊಳ್ಳುತ್ತೀರಾ. ಅವನು ದುಡ್ಡು ಕೊಡ್ತಾನೆ ಅಂತಾ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ. ನೀವೆಲ್ಲಾ ಗಂಡಸರಾ, ಬಳೆ ತೊಟ್ಟುಕೊಳ್ಳಿ. ಅವನನ್ನು ಸೇರಿಸಿಕೊಂಡರೆ ಡಿಕೆ ಅಲ್ಲಾ ಯಾರೆ ಬಂದರೂ ಕಲ್ಲಲ್ಲಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.