ಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹ

Sachin Pilot
Advertisement

ರಾಜಸ್ಥಾನ : ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಇಂದು ಜೈಪುರದಲ್ಲಿ ಗೆಹ್ಲೋಟ್ ಸರ್ಕಾರವನ್ನು ಗುರಿಯಾಗಿಸಿಟ್ಟುಕೊಂಡು ಉಪವಾಸ ಸತ್ಯಾಗ್ರವನ್ನು ಪ್ರಾರಂಭಿಸಿದ್ದಾರೆ. ಬಿಜೆಪಿ ನಾಯಕಿ ಹಾಗೂ ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಚಿನ್ ಪೈಲಟ್ಉಪವಾಸ ಸತ್ಯಾಗ್ರಹವನ್ನು ಆರಂಬಿಸಿದ್ದಾರೆ. ತಿಳಿಸಿದ್ದರು. ಪೈಲಟ್ ಅವರ ನಡೆಯನ್ನು ಪಕ್ಷ ವಿರೋಧಿ ಎಂದು ಕಾಂಗ್ರೆಸ್ ಕರೆದಿದೆ. ಅಲ್ಲದೇ ಈ ಸಂಬಂಧ ಶಾಂತವಾಗಿರುವಂತೆ, ಪಕ್ಷ ವಿರುದ್ಧ ಮಾತನಾಡದಂತೆಯೂ ಎಚ್ಚರಿಕೆ ನೀಡಿದೆ.