ಹಾವೇರಿ: ಬಹುನಿರೀಕ್ಷಿತ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಲಿದೆ.
ಭಾನುವಾರ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀವ್ರ ಪೈಪೋಟಿಯ ಮಧ್ಯೆ ನಡೆದ ಗುಪ್ತ ಮತದಾನದಲ್ಲಿ ಅತಿ ಹೆಚ್ಚು ಮತ ಗಳಿಸಿದ ಮಂಡ್ಯ ಮುಂದಿನ ಬಾರಿ ಕನ್ನಡದ ತೇರು ಎಳೆಯುವ ಅವಕಾಶ ಪಡೆದುಕೊಂಡಿತು. ಆ ಮೂಲಕ ಶನಿವಾರ ಜಟಾಪಟಿಗೆ ತಿರುಗಿದ್ದ ಸಮ್ಮೇಳನ ಸ್ಥಳ ನಿಗದಿಯ ಬಿಕ್ಕಟ್ಟು ಶಮನಗೊಂಡಿದೆ.
ಮೂರನೇ ಬಾರಿ:
ಮಂಡ್ಯ ಸಾಹಿತ್ಯ ಸಮ್ಮೇಳನದ ಅತಿಥ್ಯ ವಹಿಸುತ್ತಿರುವುದು ಇದು ಮೂರನೇ ಬಾರಿ. ೧೯೭೪ರಲ್ಲಿ ೪೮ನೇ ಸಾಹಿತ್ಯ ಸಮ್ಮೇಳನ. ಆನಂತರ ೧೯೯೪ರಲ್ಲಿ ೬೭ನೇ ನುಡಿಜಾತ್ರೆ ಜರುಗಿತ್ತು. ಇದೀಗ ಬರೋಬ್ಬರಿ ೨೯ ವರ್ಷಗಳ ಬಳಿಕ ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲಿದೆ.