ಸಕ್ಕರೆ ಕಾರ್ಖಾನೆಗಳಿಗೆ ಶಾಕ್: ದಾಳಿಗೊಳಗಾದ 21 ಕಾರ್ಖಾನೆಗಳು

ಸಕ್ಕರೆ ಕಾರ್ಖಾನೆ
Advertisement

ಬೆಳಗಾವಿ: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಲವು ಗಂಭೀರ ಸ್ವರೂಪದ ಆರೋಪ ಹೊತ್ತ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ. ಬೆಳಗಿನ ಜಾವ 7 ಕ್ಕೆ ಆರಂಭವಾದ ದಾಳಿ ಈಗಲೂ ಮುಂದುವರೆದಿದೆ, ಯಾವ ಕಾರ್ಖಾನೆಯಲ್ಲಿ ಏನು ಲೋಪವಾಗಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿಲ್ಲ.
ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತ ಶಿವಾನಂದ ಕಲಕೇರಿ ನೇತೃತ್ವದಲ್ಲಿ ದಿಢೀರ್ ದಾಳಿ ನಡೆದಿದೆ. ಕಬ್ಬು ಬೆಳೆಯುವ ರೈತರಿಗೆ ತೂಕದಲ್ಲಿ ಕಾರ್ಖಾನೆ ಗಳಿಂದ ಮೋಸವಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ 8, ಬಾಗಲಕೋಟೆ 4, ವಿಜಯಪುರ 4, ಕಲಬುರಗಿ, ಬೀದರ್ ಜಿಲ್ಲೆಯ 2, ಕಾರವಾರದ ಒಂದು ಕಾರ್ಖಾನೆಯ ಮೇಲೆ ದಾಳಿ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಮಾಲೀಕತ್ವದ ಬೆಳಗಾಂ ಶುಗರ್ಸ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ, ಕತ್ತಿ ಸಹೋದರ ಮಾಲೀಕತ್ವದ ವಿಶ್ವರಾಜ್ ಶುಗರ್ಸ, ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ ಮೇಲೆ ದಾಳಿ ನಡೆಸಿರುವ ಸಿಬ್ಬಂದಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ,
ಜವಳಿ ಮತ್ತು ಸಕ್ಕರೆ ಸಚಿವರ ನಿರ್ದೇಶನದ ಮೇರೆಗೆ ಆಯುಕ್ತರು ದಾಳಿ ನಡೆಸಿದ್ದಾರೆ,

ದಾಳಿಗೊಳಗಾದ ಕಾರ್ಖಾನೆಗಳು

ಬೆಳಗಾವಿ ಜಿಲ್ಲೆ
ಅರಿಹಂತ ಶುಗರ್ ಇಂಡಸ್ಟ್ರೀಸ್ ಲಿ., ಜೈನಾಪುರ, ತಾ: ಚಿಕ್ಕೋಡಿ, ಆಥಣಿ ಶುಗರ್ ಲಿ., ತಾ ಅಥಣಿ, ಬೆಳಗಾಂ ಶುಗರ್ ಪ್ರೈ. ಲಿ., ಹುದಲಿ, ಹರ್ಷ ಶುಗರ್ ಲಿ. ತಾ. ಸವದತ್ತಿ. ಲೈಲಾ ಶುಗರ್, (ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರು) ಕುಪ್ಪಟಗಿರಿ, ಖಾನಾಪುರ. ಶಿರಗುಪ್ಪಿ ಶುಗರ ವಕ್ರ್ಸ ಲಿ. ತಾ. ಕಾಗವಾಡ, ವೆಂಕಟೇಶ್ವರ ಪಾವರ್ ಪ್ರೋಜೆಕ್ಟ್ ಲಿ. ಬೆಡಕಿಹಾಳ. ತಾ, ಚಿಕ್ಕೋಡಿ, ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಜ ಲಿ. ಬೆಲ್ಲದಬಾಗೇವಾಡಿ. ತಾ, ಹುಕ್ಕೇರಿ. ಜೆಮ್ ಶುಗರ್ಸ್ ಲಿ. ತಾ, ಬೈಲಹೊಂಗಲ.
ಬಾಗಲಕೋಟ ಜಿಲ್ಲೆ.
ಬೀಳಗಿ ಶುಗರ್ ಮಿಲ್ ಲಿ. ತಾ, ಬೀಳಗಿ, ನಿರಾಣಿ ಶುಗರ್ಸ್ ಲಿ. ಮುಧೋಳ, ಪ್ರಭುಲಿಂಗೇಶ್ವರ ಶುಗರ್ ಲಿ., ಸಿದ್ದಾಪುರ, ತಾ: ಜಮಖಂಡಿ,
ಬೀದರ್ ಜಿಲ್ಲೆ
ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಲಿ., ಮೊಗದಲ್ ಗ್ರಾಮ, ನ್ಯಾಷನಲ್ ಹೈವೇ. ಮಹಾತ್ಮಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ತಾ: ಭಾಲ್ಕಿ,
ಕಲಬುರ್ಗಿ ಜಿಲ್ಲೆ
ರೇಣುಕಾ ಶುಗರ್, ಹವಳಗಾ, ತಾ: ಅಪ್ಪಲ್ಪುರ, ಜಿ: ಕಲಬುರ್ಗಿ ಎನ್.ಎಸ್.ಎಲ್ ಶುಗರ್, (ಸಹಕಾರಿ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರು) ಭೂಸನೂರು, ತಾ: ಆಳಂದ.
ವಿಜಯಪುರ ಜಿಲ್ಲೆ
ಇಂಡಿಯನ್ ಶುಗರ್ ಮ್ಯಾನುಫ್ಯಾಕ್ಟರಿಂಗ್ ಲಿ., ಹಾವಿನಾಳ, ತಾ: ಇಂಡಿ, ಜಮಖಂಡಿ ಶುಗರ್ ಲಿ., (ಘಟಕ-2) ನಾದ್ ಕೆ.ಡಿ., ತಾ: ಇಂಡಿ, ಕೆ.ಪಿ.ಆರ್. ಶುಗರ್ ಮಿಲ್ಸ್, ಆಲಮೇಲು =ತಾ: ಸಿಂಧಗಿ, ಶ್ರೀ ಬಸವೇಶ್ವರ ಶುಗರ್ ಲಿ., ಕಾರಜೋಳ, ತಾ: ಬಸವನಬಾಗೇವಾಡಿ.
ಉತ್ತರ ಕನ್ನಡ ಜಿಲ್ಲೆ
ಇ.ಐ.ಡಿ. ಪ್ಯಾರಿ (ಇಂಡಿಯಾ) ಲಿ., ಹಳಿಯಾಳ