ಧಾರವಾಡ: ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ವೇಷ, ಭೂಷಣ, ಸಂಪ್ರದಾಯ ಪ್ರದರ್ಶನಗೊಳ್ಳುತ್ತಿದ್ದು, ಯುವಕರು ತಮ್ಮ ಪ್ರದೇಶದ ಉಡುಗೆ-ತೊಡುಗೆಯನ್ನು ಸಂತೋಷದಿಂದ ಪ್ರದರ್ಶನ ಮಾಡುತ್ತಿದ್ದಾರೆ. ಧಾರವಾಡದಲ್ಲಿ ನೆಲೆಸಿದ್ದ ವಿವಿಧ ರಾಜ್ಯಗಳ ಯುವಜನರು ತಮ್ಮ ರಾಜ್ಯದ ಸಂಪ್ರದಾಯ ಉಡುಗೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೃಷಿ ವಿಶ್ವವಿದ್ಯಾಲಯದಲ್ಲಿ ಉಪಹಾರ ಮಾಡಿದ ಕಲಾವಿದರು, ಕುಶಲಕರ್ಮಿಗಳು ಹಾಗೂ ಕ್ರೀಡಾಪಟುಗಳು ಮೊಬೈಲ್‌ಗಳಲ್ಲಿ ಫೋಟೊ ತೆಗೆದುಕೊಳ್ಳುತ್ತಿದ್ದರು.
ಯುವಕರು ತಮ್ಮ ಮಾತೃಭಾಷೆಯಲ್ಲಿ ತಾವು ಪ್ರತಿನಿಧಿಸುವ ರಾಜ್ಯಕ್ಕೆ ಜೈಕಾರ ಹಾಕುತ್ತ ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಛತ್ತೀಸಗಢದ ಯುವಕರು “ಛತ್ತೀಸ್‌ಗಡಿಯಾ ಸಬ್‌ಸೇ ಬಡಿಯಾ’ ಎಂದು ಘೋಷಣೆ ಕೂಗಿದರು. ಲುಂಗಿ ಧರಿಸಿದ್ದ ಆಂಧ್ರ ಪ್ರದೇಶದ ಯುವಕರು “ಲುಂಗಿ ಡ್ಯಾನ್ಸ್’ ಮಾಡಿ ಗಮನ ಸೆಳೆದರು.