ಧಾರವಾಡ: ೨೬ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಗಾನ ಮಾಂತ್ರಿಕ ವಿಜಯ ಪ್ರಕಾಶ ಹಾಡಿನ ಮೂಲಕ ಪ್ರೇಕ್ಷಕರನ್ನು ಮಂತ್ರಮಿಗ್ಧಗೊಳಿಸಿದರು.
ಕಾಂತಾರ ಚಿತ್ರದ ಸಿಂಗಾರ ಸಿರಿ ಹಾಡಿಗೆ ನೆರೆದ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ನಂತರದಲ್ಲಿ ದಿಲ್ ಕ್ಯಾ ಕರೇ ಜಬ್ ಕಿಸಿಕೋ ಕಿಸಿಸೇ ಪ್ಯಾ ಹೋ ಜಾಯ್ ಹಾಡು ಪ್ರಸ್ತುತಪಡಿಸಿದರೆ ಪ್ರತಿಯೊಂಬರೂ ಸಂಗೀತದ ಅಲೆಯಲ್ಲಿ ತೇಲಾಡಿದರು.
ವಿಜಯಪ್ರಕಾಶ ಹಾಡಿದ ಸಿಂಗಾರ ಸಿರಿ ಹಾಡಿಗೆ ಫಿದಾ ಆದ ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳು ವೇದಿಕೆಗೆ ಆಗಮಿಸಿ ಸಿಂಗಾರ ಸಿರಿ ಹಾಡಿಗೆ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು.