ಹುಬ್ಬಳ್ಳಿ : ಜಗದೀಶ ಶೆಟ್ಟರ ಸಜ್ಜನ, ನಿಷ್ಠುರ ಮತ್ತು ಪ್ರಾಮಾಣಿಕ ರಾಜಕಾರಣಿ. ಆದರೆ, ಬಿಜೆಪಿ ಅವರನ್ನು ಈಚೆಗೆ ನಡೆಸಿಕೊಂಡ ರೀತಿ ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಜಗದೀಶ ಶೆಟ್ಟರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಜಗದೀಶ ಶೆಟ್ಟರು ಮತ್ತು ನಮ್ಮ ಸಂಬಂಧ ಉತ್ತಮವಾದುದು. ಬೇರೆಯವರಂತೆ ಕೆಲಸ ಕಾರ್ಯಗಳಿಗೆ ಲಾಬಿ ಮಾಡಿದವರಲ್ಲ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವ ಕೆಲಸಕ್ಕೂ ಅವರು ಕೇಳಿಕೊಂಡು ಬಂದಿರಲಿಲ್ಲ. ಫೋನ್ ಕೂಡಾ ಮಾಡಿದವರಲ್ಲ. ಅಷ್ಟೊಂದು ಕಟ್ಟುನಿಟ್ಟಿನ ವ್ಯಕ್ತಿ ಅವರು. ನಾನು ಸಿಎಂ ಆದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಸಿಎಂ ಆದಾಗ ನಾನು ವಿಪಕ್ಷ ನಾಯಕನಾಗಿದ್ದೆ ಎಂದು ವಿವರಿಸಿದರು.
ಜನಸಂಘದ ಕುಟುಂಬದಿಂದ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದರೂ ಸಹ ತಮ್ಮದೇ ಆದ ತತ್ವ ಸಿದ್ಶಾಂತ,
ಹೊಂದಿರುವಂತಹ ವ್ಯಕ್ತಿತ್ವ. ಎಲ್ಲಕ್ಕೂ ಮುಖ್ಯವಾಗಿ ಸ್ವಾಭಿಮಾನಿ ವ್ಯಕ್ತಿತ್ವ. ಈಗ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಬಲ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.