ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿ ಬಣಜಿಗ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಪಕ್ಷ ಬಣಜಿಗ ಸಮಾಜಕ್ಕೆ ಅನ್ಯಾಯ ಮಾಡಿದೆ. ಜಗದೀಶ ಶೆಟ್ಟರ್ ಯಾರನ್ನು ಬೆಳೆಸಿದ್ದಾರೆ ಅವರಿಂದಲೇ ಇಂದು ಟಿಕೆಟ್ ಕೈತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದವರನ್ನೇ ಪಕ್ಷ ಕೈ ಬಿಟ್ಟಿದೆ. ನಮ್ಮ ಸಮಾಜ ರಾಜ್ಯಕ್ಕೆ ೭ ಜನ ಮುಖ್ಯಮಂತ್ರಿಗಳನ್ನು ನೀಡಿದೆ. ಬಿಜೆಪಿ ಮತ್ತು ಉತ್ತರ ಕರ್ನಾಟಕಕ್ಕಾಗಿ ಶೆಟ್ಟರ್ ಕೊಡುಗೆ ಅಪಾರ. ಅದಕ್ಕಾಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರೊ. ವಿ.ಸಿ. ಸವಡಿ, ಶಿವಾನಂದ ಕವಳಿ, ಮೃತ್ಯುಂಜಯ ಕರಡಿಗುಡ್ಡ, ರಾಜಶೇಖರ ಉಪ್ಪಿನ, ಶೇಖರ ಕವಳಿ, ಅರುಣ ಶೀಲವಂತ ಇತರರು ಇದ್ದರು.