ಹುಬ್ಬಳ್ಳಿ: ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ತಪ್ಪುತ್ತದೆ ಎಂದರೆ ಆಶ್ಚರ್ಯ. ಅವರು ಪಕ್ಷ ಕಟ್ಟಿ ಬೆಳೆಸಿದವರು. ಕೆಲಸಗಾರರು. ಇಂಥವರಿಗೆ ಅನ್ಯಾಯ ಆಗಬಾರದು ಎಂದು ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ ಎಂಬ ಪಕ್ಷದ ವರಿಷ್ಠರು ಸೂಚನೆ ನೀಡಿದ ಸ್ವಾಮೀಜಿಯವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಜಗದೀಶ ಶೆಟ್ಟರ ಸಕ್ರಿಯ ರಾಜಕಾರಣಿಗಳು. ಈಶ್ವರಪ್ಪ ಅವರೂ ಪಕ್ಷ ಕಟ್ಟಿದವರು. ಇಂಥವರೆಲ್ಲ ಇರಬೇಕು. ವರಿಷ್ಠರು ತಮ್ಮ ತೀರ್ಮಾನ ಮರು ಪರಿಶೀಲನೆ ಮಾಡಬೇಕು ಎಂದರು.