ಶುದ್ಧ ಸಮಾಜ ನಿರ್ಮಾಣಕ್ಕೆ ಪಾದಯಾತ್ರೆ

Examba
Advertisement

ಬೆಳಗಾವಿ(ಯಕ್ಸಂಬಾ): ಹತ್ತು ಹಲವಾರು ಜನಜಾಗೃತಿಗಾಗಿ ಒಳಗೊಂಡು ಶುದ್ಧ, ಸುಂದರ ಸಮಾಜ ನಿರ್ಮಾಣಕ್ಕೆ ಶ್ರೀಶೈಲ ಜಗದ್ಗುರುಗಳು ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದಲು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀಶೈಲ ಜಗದ್ಗುರುಗಳು ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಕೈಗೊಂಡು ಅದರಲ್ಲಿ ಸಾಮಾಜಿಕ ಜನಜಾಗೃತಿಗೆ ಪಣತೊಟ್ಟಿದ್ದಾರೆ ಎಂದರು.
ಹಳ್ಳಿ ಹಳ್ಳಿಗಳಿಗೆ ಧರ್ಮ ಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ, ಪಾದಯಾತ್ರೆಯ ಮಾರ್ಗದ ಎರಡೂ ಬದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಅವರೂ ಪಾದಯಾತ್ರೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.