ಶಿರಸಿ: ಪರಿಸರ ಹಾಗೂ ತೋಟಗಾರಿಕಾ ಕಾಲೇಜುಗಳು ಜಿಲ್ಲೆಯಲ್ಲಿರುವ ಕಾರಣ ಎರಡನ್ನು ಸಂಯೋಜಿಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೀವಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪರಿಸರ, ತೋಟಗಾರಿಕೆ, ಕೃಷಿ, ಜೀವವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಹಾಗೂ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಜೀವಪರಿಸರ ವಿಶ್ವವಿದ್ಯಾಲಯವನ್ನ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿರಸಿಯಲ್ಲಿ ಸ್ಥಾಪನೆ ಮಾಡಲಿದ್ದೇವೆ. ಈ ವಿಶ್ವವಿದ್ಯಾಲಯದ ಜತೆಗೆ ಸಾಂಪ್ರದಾಯಿಕ ಶಿಕ್ಷಣವಾದ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಕೂಡ ಇರಲಿದೆ. ಈ ಕಾಂಪೋಸಿಟ್ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.