ಶಿಥಿಲ ಸೇತುವೆ ಕೆಳಗೆ ಮಲಗಿದ ರಾಮುಲು

ರಾಮಲು
Advertisement

ಬಳ್ಳಾರಿ: ತಾಲ್ಲೂಕಿನ ಬಿ. ಡಿ.ಹಳ್ಳಿ ಬಳಿಯ ಬ್ರಿಟಿಷ್ ಕಾಲದ ಮೇಲ್ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಂಡು ರೈತರ ಜಮೀನುಗಳಿಗೆ ನೀರು ಹರಿಸುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಶಪತ ಮಾಡಿದ ಸಚಿವ ರಾಮುಲು ಸೇತುವೆ ಅಡಿಯೇ ಮಲಗಿಕೊಂಡು ಗಮನ ಸೆಳೆದಿದ್ದಾರೆ.
ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಸೇತುವೆಯ ಒಂದು ಆಧಾರ ಕಂಭ ಅತಿ ಹೆಚ್ಚು ನೀರು ಬಂದ ಕಾರಣ ಕೊಚ್ಚಿ ಹೋಯಿತು. ಸೇತುವೆಯ ಆತುಕೊಂಡ ಎಲ್ ಎಲ್ ಸಿ ಕಾಲುವೆ ಸಹ ಇರುವದರಿಂದ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಖ್ಯ ಕಾಲುವೆಗೆ ನೀರು ನಿಲ್ಲಿಸಿದ್ದರು.
ತುಂಗಾ ಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ದರೂರ ಪುರುಷೋತ್ತಮ ಗೌಡ ಸೇರಿದಂತೆ ಹಲವು ಮುಖಂಡರು ರೈತರ ಪರ ದನಿ ಎತ್ತಿದ ಕಾರಣಕ್ಕೆ ಕಾಡ ಅಧಿಕಾರಿಗಳು ಕಂಬ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರು. ಆದ್ರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿದ ಕಾರಣಕ್ಕೆ ಇಂದು ರಾಮುಲು ಸೇತುವೆ ಕೆಳಗೆ ಮಲಗಿ ಕಾಮಗಾರಿ ವೇಗ ಹೆಚ್ಚಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು.
ಅಧಿಕಾರಿಗಳು ಭರವಸೆ ನೀಡಿದಂತೆ ಇಂದು ಸಂಜೆ ವೇಳೆಗೆ ಕಾಮಗಾರಿ ಪೂರ್ಣ ಆಗುವ ಸಾಧ್ಯತೆ ಇದೆ.