ಚಿತ್ರದುರ್ಗ: ಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಕಳೆದ ಅಕ್ಟೋಬರ್ 31 ರಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ತಮ್ಮ ನಿವಾಸದಲ್ಲಿ ಉಪಹಾರ ಸೇವನೆ ಮಾಡುವಾಗ ದೂರವಾಣಿ ಕರೆಯೊಂದು ಬಂದಿದೆ. ಪ್ರತಿನಿತ್ಯ ಕ್ಷೇತ್ರದ ಜನತೆಯ ದೂರವಾಣಿ ಕರೆಗಳು ಬಂದಂತೆ ಈ ಕರೆಯು ಸಹ ಬಂದಿದೆ ಎಂದು ಕರೆಯನ್ನು ಸ್ವೀಕರಿಸಿದಾಗ ಆ ಮೊಬೈಲ್ ವಿಡಿಯೋ ಕರೆಯಲ್ಲಿ ಯಾವುದೋ ಯುವತಿಯೋರ್ವಳು ಹಿಂದಿಯಲ್ಲಿ ಮಾತನಾಡುತ್ತಿದ್ದರು ಆಗ ಆ ಕರೆಯನ್ನು ಕಟ್ ಮಾಡಿರುವುದಾಗಿ ತಿಳಿಸಿರುವ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು, ನಂತರ ಮೂರು ಭಾರೀ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಯುವತಿ ನಗ್ನಾವಾಗಿದ್ದು, ಖಾಸಗಿ ಅಂಗಾಂಗಗಳನ್ನು ತೋರಿಸಿದ್ದಾರೆ ಆಗ ಕಾಲ್ ಕಟ್ ಮಾಡಿದ್ದಾರೆ. ನಂತರ ತಕ್ಷಣವೇ ಅದೇ ನಂಬರ್ ನಿಂದ ವಿಡಿಯೋ ಮೆಸೆಜ್ ಒಂದುನ್ನು ಕಳುಹಿಸಿದ್ದಾರೆ. ಆದ್ದರಿಂದ ಬೈಲ್ ನಂಬರಿನ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ್, ಶಾಸಕರು ನೀಡಿರುವ ದೂರನ್ನು ದಾಖಲಿಸಿಕೊಂಡು ಪ್ರತ್ಯೇಕ ತಂಡವನ್ನು ರಚಿಸಿ ಯುವತಿಯ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ನೋಡಿದಾಗ ಯುವತಿಯ ನಗ್ನ ವಿಡಿಯೋ ಕರೆಯು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿಸುವ ಯತ್ನ ನಡೆಯುತ್ತಿದೆಯಾ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಿದೆ.