ಶಾಸಕ ಜಾಧವ ಬೆಂಬಲಿಗರ ಮೇಲೆ ಹಲ್ಲೆ, ಕಾರು ಜಖಂ

ಕಾರು
Advertisement

ಕಲಬುರಗಿ: ಚಿಂಚೋಳಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಡಾ. ಅವಿನಾಶ್ ಜಾಧವ ಅವರ ಬೆಂಬಲಿಗರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಐದು ಕಾರು ಜಖಂಗೊಳಿಸಿದ ಘಟನೆ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ದಲಿತರ ಓಣಿಯಲ್ಲಿ ನಡೆದಿದೆ.
ಘಟನೆಯಲ್ಲಿ ಜಾಧವ ಅವರ ನಾಲ್ಕರು ಬೆಂಬಲಿಗರಿಗೆ ಸಣ್ಣ ಪುಟ್ಟ ಗಾಯ ಕಾರಣ. ಪ್ರಚಾರ ಮಾಡಿಕೊಂಡು ಮುಗಿಸಿಕೊಂಡು ದುರದ್ದೇಶದಿಂದ ಗುಂಪೊಂದು ಅಂಬೇಡ್ಕರ್ ಮೂರ್ತಿಗೆ ಏಕೆ ಮಾರ್ಲಾಪಣೆ ಮಾಡಿಲ್ಲ ಜಗಳಕ್ಕೆ ಮುಂದಾಗಿದ್ದಾರಂತೆ. ಸಾಮಾನ್ಯವಾಗಿ ಯಾವುದೇ ಗ್ರಾಮಕ್ಕೆ ತೆರಳುವ ಮೊದಲು ಗ್ರಾಮದಲ್ಲಿರುವ ಎಲ್ಲ ಮಹಾನ್ ಪುರುಷರ ಮೂರ್ತಿಗಳಿಗೆ ಮಾರ್ಲಾಪಣೆ ಮಾಡಿದರೆ ಗ್ರಾಮ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.