ಶಾಲೆಗೆ ಮದ್ಯ ಸೇವಿಸಿ ಟೈಟಾಗಿ ಬಂದ ಶಿಕ್ಷಕ

ಶಿಕ್ಷಕ
Advertisement

ವಿಜಯಪುರ: ಶಾಲೆಗೆ ಮದ್ಯ ಸೇವಿಸಿ ಟೈಟಾಗಿ ಬಂದ ಶಾಲಾ ಶಿಕ್ಷಕನಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ವಿಜಯಪುರ ತಾಲೂಕಿನ ಕನ್ನೂರು ಬಾಲಕಿಯರ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಬಿ.ಎಸ್. ರಾಠೋಡ ಎಂಬಾತನೇ ಕುಡಿದು ಶಾಲೆಗೆ ಬಂದಿದ ಶಿಕ್ಷಕ. ಇನ್ನು ಈ ಶಿಕ್ಷಕ ಶಾಲೆಗೆ ಅನಧಿಕೃತ ಗೈರಾಗುತ್ತಾರೆ. ಒಂದು ವೇಳೆ ಶಾಲೆಗೆ ಬಂದರೆ ಕುಡಿದು ಶಾಲೆಗೆ ಬರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಲಾ ಶಿಕ್ಷಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.