ಧಾರವಾಡ: ಶಾಲೆಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಹಾಕುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಖಂಡನೀಯ ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ವಿವೇಕಾನಂದ ಶತಮಾನದ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರು. ಜಗತ್ತಿಗೆ ಭಾರತದ ವಿಶೇಷತೆಯನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ. ಅವರ ಭಾವಚಿತ್ರ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ. ಅವರೊಂದಿಗೆ ಛತ್ರಪತಿ ಶಿವಾಜಿ, ಅರವಿಂದರ ಭಾವಚಿತ್ರವನ್ನೂ ಶಾಲೆಗಳಲ್ಲಿ ಹಾಕಬೇಕು. ಇಂಥ ವ್ಯಕ್ತಿಗಳು ಮಕ್ಕಳಿಗೆ ಪರಿಚಯವಾಗುವುದು ಅಗತ್ಯವಾಗಿದೆ. ಸರಕಾರ ಈ ದಿಸೆಯಲ್ಲಿ ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮೈಸೂರಿನಲ್ಲಿ ಬಸ್ ನಿಲ್ದಾಣವನ್ನು ಗುಂಬಜ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದನ್ನು ಸಂಸದ ಪ್ರತಾಪಸಿಂಹ ಖಂಡಿಸಿದ್ದು ಸಮರ್ಪಕವಾಗಿದೆ. ಒಬ್ಬ ಸಂಸದರಾಗಿ ವಿರೋಧಿಸುವ ಹಕ್ಕು ಅವರಿಗಿದೆ. ಮತೀಯ ಆಕೃತಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಈ ಕುರಿತು ಚಿಂತಿಸಬೇಕಿತ್ತು. ಮುಂದೆ ಇದೇ ಕಟ್ಟಡವನ್ನು ದರ್ಗಾ ಎಂದು ಹೇಳಿ ಇಲ್ಲಿ ಪ್ರಾರ್ಥನೆ ಮಾಡಬಹುದು. ಆದ್ದರಿಂದ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
Home ನಮ್ಮ ಜಿಲ್ಲೆ ಧಾರವಾಡ ಶಾಲೆಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಹಾಕುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಖಂಡನೀಯ: ಚಕ್ರವರ್ತಿ ಸೂಲಿಬೆಲೆ