ಉಳ್ಳಾಗಡ್ಡಿ-ಖಾನಾಪೂರ: ಸಮೀಪದ ಹೆಬ್ಬಾಳ ಗ್ರಾಮದ ಹೆಬ್ಬಾಳ ಕೋಚರಿ ರಸ್ತೆಯಲ್ಲಿರುವ ಅಕ್ಷಯ ಪೇವರ್ಸ್ ಘಟಕದಲ್ಲಿ ಶುಕ್ರವಾರ ಶಾರ್ಟ್ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿ ಅಪಾರ ಹಾನಿ ಸಂಭವಿಸಿದೆ.
ಹೆಬ್ಬಾಳ ಗ್ರಾಮದ ಅಕ್ಷಯ ವೀರಮುಖ ಅವರಿಗೆ ಸೇರಿದ್ದ ಈ ಘಟಕದಲ್ಲಿ ಸುಮಾರು 2500 ಕ್ಕೂ ಹೆಚ್ಚು ಪೇವರ್ ಬ್ಲಾಕ್ ಸೇರಿದಂತೆ ಒಟ್ಟು 9 ಲಕ್ಷ ರೂ.ಗಳು, ಪ್ಲೈವುಡ್ ಸುಮಾರು ೫೦ ಒಟ್ಟು 1 ಲಕ್ಷ ರೂ ಹಾಗೂ ಯಂತ್ರೋಪಕರಣ ಮತ್ತು ವೈರಿಂಗ್ ಸೇರಿದಂತೆ ಇತರೆ ವಸ್ತುಗಳು ಸೇರಿ ಒಟ್ಟು 12 ಲಕ್ಷ ರೂ.ಗಳಷ್ಟು ಹಾನಿಯಾಗಿದೆ ಎನ್ನಲಾಗಿದೆ.
ಸಂಕೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ರಾಚಯ್ಯಾ ಪೂಜೇರಿ ಹಾಗೂ ಸಿಬ್ಬಂದಿಯವರ ತುರ್ತು ಕ್ರಮದಿಂದ ಹೆಚ್ಚಿನ ಅವಘಡ ಸಂಭವಿಸಿದೆ. ಹೊರವಲಯದಲ್ಲಿದ್ದ ಈ ಅಕ್ಷಯ ಪೇವರ್ಸ್ ಘಟಕದಲ್ಲಿ ಹೆಚ್ಚಿನ ಬೆಂಕಿ ಹಾಗೂ ಹೊಗೆ ಆವರಿಸಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.