ಶಸ್ತ್ರಾಸ್ತ್ರ ರಫ್ತು-ಭಾರತ ಶೀಘ್ರ ಮುಂಚೂಣಿಗೆ

ARAVIND
Advertisement

ಹುಬ್ಬಳ್ಳಿ: ಭಾರತ ಕೆಲವೇ ವರ್ಷಗಳಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ರಫ್ತು ಕ್ಷೇತ್ರದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ. ರಕ್ಷಣಾ ವಲಯಕ್ಕೆ ಅತ್ಯಗತ್ಯವಾದ ಸೆಮಿಕಂಡಕ್ಟರ್ ತಯಾರಿಕೆಯ ರಾಷ್ಟ್ರದ ಮೊದಲ ಹೈಟೆಕ್ ಘಟಕ ಶೀಘ್ರವೇ ಸ್ಥಾಪನೆಯಾಗಲಿದೆ ಎಂದು ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರ ಡಾ.ಜಿ.ಸತೀಶ ರೆಡ್ಡಿ ಹೇಳಿದರು.
ಆತ್ಮನಿರ್ಭರ ಯೋಜನೆಯಡಿ ತಯಾರಿಸಲಾದ ರಕ್ಷಣಾ ಉತ್ಪನ್ನಗಳ ವಸ್ತುಪ್ರದರ್ಶನವನ್ನು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಿ ಅವರು ಮಾತನಾಡಿದ ಅವರು, `ಆತ್ಮನಿರ್ಭರರಾಗಲು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ ಮೇಲೆ ದೇಶದ ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಕ್ರಾಂತಿಯೇ ಆಗಿದೆ. ಈಗ ವಿಶ್ವಕ್ಕಾಗಿ ತಯಾರಿಸುವಂತೆ ಪ್ರಧಾನಿಗಳು ಕರೆ ಕೊಟ್ಟಿರುವುದರಿಂದ, ಉತ್ಪಾದನೆಯ ಗತಿಗೆ ಇನ್ನಿಲ್ಲದ ವೇಗ ಬಂದಿದೆ. ಹೀಗಾಗಿ, ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಅಗ್ರ ರಾಷ್ಟ್ರವಾಗಲಿದೆ. ಅಮೆರಿಕ, ರಷ್ಯಾ, ಚೀನಾ ಜೊತೆ ಸ್ಥಾನ ಹಂಚಿಕೊಳ್ಳಲಿದೆ ಎಂದರು.