ಹುಬ್ಬಳ್ಳಿ : ವಿಜಯಪುರದ ಜ್ಞಾನ ಯೋಗಾಶ್ರಮ ಹಾಗೂ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳವರ ಸಮಸ್ತ ಭಕ್ತವೃಂದ ಸಂಯುಕ್ತಾಶ್ರಯದಲ್ಲಿ ನಗರದ ಚೇತನಾ ಪಬ್ಲಿಕ್ ಸ್ಕೂಲ್ ಶತಮಾನದ ಸಂತ ಸಿದ್ಧೇಶ್ವರ ಮಹಾಸ್ವಾಮಿಗಳ ನುಡಿ ನಮನ ಸಲ್ಲಿಸಲಾಯಿತು.
ಬಸವಲಿಂಗ ಮಹಾಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ, ಶ್ರದ್ಧಾನಂದ ಸ್ಚಾಮೀಜಿ, ಹರ್ಷಾನಂದ ಸ್ವಾಮೀಜಿ, ಅಮೃತಾನಂದ ಸ್ವಾಮೀಜಿ, ಜ್ಞಾನಯೋಗಾಶ್ರಮದ ಷಡಕ್ಷರಿ ಮಹಾಸ್ವಾಮೀಜಿ, ಸಿದ್ಧಲಿಂಗ ಮಹಾಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಗದೀಶ ದ್ಯಾವಪ್ಪನವರ, ಮಹೇಶ ದ್ಯಾವಪ್ಪನವರ, ವಿಶ್ವನಾಥ ಕೊರವಿ ಸೇರಿದಂತೆ ಇತರರು ಇದ್ದರು.