ಶೆಟ್ಟರ ಜತೆಗೆ ಸಂಧಾನ ವಿಫಲ

ಶೆಟ್ಟರ್‌
Advertisement

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್‌ ಜತೆಗೆ ಮಾತುಕತೆ ನಡೆಸಿದ ಬಿಜೆಪಿ ನಾಯಕರು ಮಾಧ್ಯಮದ ಎದುರು ಏನೂ ಮಾತನಾಡದೆ ಸುಮ್ಮನೆ ಹೊರ ನಡೆದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ ಮೂವರು ಜಗದೀಶ ಶೆಟ್ಟರ ಅವರ ಮನೆಯಲ್ಲಿ ಸುಮಾರು ಮುಕ್ಕಾಲು ಗಂಟೆ ಮಾತುಕತೆ ನಡೆಸಿದ್ದಾರೆ. ಆದರೆ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡುವಂತೆ ಶೆಟ್ಟರ ಪಟ್ಟು ಹಿಡಿದಿದ್ದು, ಬೇರೆಯವರಿಗೆ ಕ್ಷೇತ್ರ ಬಿಟ್ಟುಕೊಡುವಂತೆ ನಾಯಕರು ಮನವೊಲಿಸಲು ಪ್ರಯತ್ನಿಸಿದರಾದರೂ ಕೊನೆಗೆ ವಿಫಲರಾಗಿ ಹೊರನಡೆದಿದ್ದಾರೆ.