ಶಂಕಿತ ಉಗ್ರರಿಗೆ ಕರಾವಳಿ, ಕೇರಳದ ನಂಟು

ಆರಗ ಜ್ಞಾನೇಂದ್ರ
Advertisement

ಶಂಕಿತ ಉಗ್ರರಿಗೆ ಕರಾವಳಿ, ಕೇರಳದ ನಂಟು ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಂಕಿತ ಉಗ್ರರ ಮೂಲ ತೀರ್ಥಹಳ್ಳಿ ಆಗಿದ್ದರೂ ಅವರ ಸಹವಾಸ ಕರಾವಳಿಯದ್ದು. ಆದ್ದರಿಂದ ಯುವಕರು ಮತಾಂಧತೆಗೆ ಒಳಗಾಗುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನು ಬಳಸಬೇಕಾಗುತ್ತದೆ ಎಂದರು. ಇಂತಹ ವ್ಯಕ್ತಿಗಳನ್ನು ಬೆಲೆಯುವ ಮುನ್ನವೇ ಬಂಧಿಸಿದ ಶಿವಮೊಗ್ಗ ಪೊಲೀಸರನ್ನು ಪುರಸ್ಕರಿಸುತ್ತೇವೆ ಎಂದರು.