ವ್ಯಾಪಾರ ವಹಿವಾಟು ಬಂದ್, ಭಕ್ತಿ ಭಾವದ ಪರಾಕಾಷ್ಠೆ

Advertisement

ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳ ಮೇಲೆ ವಿಜಯಪುರ ಭಕ್ತರು ಇರಿಸಿದ ಅದಮ್ಯ ಭಕ್ತಿ ಅನನ್ಯ. ಅವರ ಅಂತಿಮ ದರ್ಶನ ಸಂದರ್ಭದಲ್ಲಿ ಶ್ರೀಗಳ ಭಕ್ತರ ಭಕ್ತಿ ಭಾವದ ಪರಾಕಾಷ್ಠೆ ಕಂಡು ಬಂದವು.
ಸಿದ್ದೇಶ್ವರ ಸ್ವಾಮೀಜಿಗಳು ಪ್ರವಚನದಲ್ಲಿ ಸಾರುತ್ತಿದ್ದ ಸೇವೆ ಎಂಬ ಸಂಕಲ್ಪವನ್ನು ಅನೇಕ ಭಕ್ತರು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು.
ವಿಜಯಪುರ ನಗರದ ಎಲ್ಲ ಅಂಗಡಿಗಳು ಬಂದ್ ಆಗಿದ್ದವು, ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ಶ್ರೀಗಳ ದರ್ಶನಕ್ಕೆ ತೆರಳುವ ಜನರೇ ಎಲ್ಲೆಡೆ ಗೋಚರಿಸುತ್ತಿದ್ದರು. ಬೇರೆ ಯಾವ ವಹಿವಾಟುಗಳು ನಡೆಯಲಿಲ್ಲ, ಶ್ರೀಗಳ ಅಗಲಿಕೆಯ ಸುದ್ದಿ ಕೇಳಿದ ತಕ್ಷಣ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು. ಚಿತ್ರಮಂದಿರಗಳು ಪ್ರದರ್ಶನ ರದ್ದುಗೊಳಿಸಿದವು. ಆ ಮೂಲಕ ಸಹಸ್ರಮಾನದ ಸಂತನಿಗೆ ಗೌರವ ಸಲ್ಲಿಸಿತು.