ವ್ಯಕ್ತಿ ಶಾಶ್ವತವಲ್ಲ ಚಿಂತನೆಗಳು ಶಾಶ್ವತ: ಹೆಗ್ಗಡೆ

virendra Hegade
Advertisement

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ ವೀರೇಂದ್ರ ಹೆಗ್ಗಡೆ ಅವರು ನುಡಿ ನಮನ ಸಲ್ಲಿಸಿದ್ದು ಅದರಲ್ಲಿ ಅವರು ಪೂಜ್ಯ ಸಿದ್ದೇಶ್ವರ ಶ್ರೀಗಳು ಸರಳವಾಗಿ ಜೀವಿಸಿ ಅತ್ಯಂತ ಎತ್ತರಕ್ಕೇರಿದ ಧೀಮಂತರು. ಪೂಜ್ಯರ ನಿಧನದಿಂದಾಗಿ ಜ್ಯೇಷ್ಠ ಚಿಂತಕರೊಬ್ಬರನ್ನು ಶ್ರೇಷ್ಠ ಮಹಾತ್ಮರನ್ನು ಕಳೆದುಕೊಂಡಂತಾಗಿದೆ. ವ್ಯಕ್ತಿ ಶಾಶ್ವತವಲ್ಲ ಆದರೆ ಚಿಂತನೆಗಳು ಶಾಶ್ವತ ಎಂಬಂತೆ ಪೂಜ್ಯ ಶ್ರೀಗಳ ಚಿಂತನೆಗಳು ಸದಾ ನಮ್ಮೊಂದಿಗೆ ಇರಲೆಂದು ಆಶಿಸುತ್ತೇನೆ ಎಂದಿದ್ದಾರೆ.