ವೇತನ ಬಿಡುಗಡೆಗೆ ಆಗ್ರಹಿಸಿ ಮೇಯರ್ ಮನೆಗೆ ಮುತ್ತಿಗೆ

Advertisement

ಧಾರವಾಡ: ಜಲಮಂಡಳಿಯ ವಾಲಮೆನ್ ಗಳು ವೇತನ ಬಿಡುಗಡೆಗೆ ಆಗ್ರಹಿಸಿ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದರು. ವೇತನ ಬಿಡುಗಡೆಯ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಹಾಪೌರರನ್ನು ಒತ್ತಾಯಿಸಿದರು. ಆದರೆ, ನ್ಯಾಯಾಲಯದ ಆದೇಶದ ವಿರುದ್ಧ ಯಾರೂ ಕ್ರಮ ಕೈಗೊಳ್ಳಲು ಬಾರದು ಎಂದು ಮಹಾಪೌರರು ವಾಲಮೆನ್ ಗಳನ್ನು ಸಮಾಧಾನಪಡಿಸಿದರು.
ಈ ಸಂದರ್ಭದಲ್ಲಿ ವಾಲಮೆನ್ ಮತ್ತು ಮಹಾಪೌರರ ಮಧ್ಯೆ ವಗ್ವಾದ ನಡೆಯಿತು.