ವೀರರಾಣಿ ಕಿತ್ತೂರ ಚನ್ನಮ್ಮ ಮೆಗಾ ನಾಟಕ ಪ್ರದರ್ಶನಕ್ಕೆ ಮುಖ್ಯಮಂತ್ರಿ ಚಾಲನೆ ಕಿತ್ತೂರ ಅಭಿವೃದ್ಧಿಗೆ ಸರಕಾರ ಬದ್ಧ: ಸಿಎಂ

Advertisement

ಧಾರವಾಡ: ಭಾರತೀಯ ಸ್ವಾತಂತ್ರö್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸ್ಥಾನದ ಐತಿಹಾಸಿಕ ಕಿತ್ತೂರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಕರ್ನಾಟಕ ಕಾಲೇಜ್ ಆವರಣದಲ್ಲಿ ನಡೆದ ವೀರರಾಣಿ ಕಿತ್ತೂರ ಚನ್ನಮ್ಮ ಮೆಗಾ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಿತ್ತೂರು ಕೋಟೆಯನ್ನು ನವೀಕರಿಸಲಾಗುತ್ತಿದ್ದು, ೧೦೦ ಕೋಟಿ ರೂ. ಅನುದಾನದಲ್ಲಿ ಕಿತ್ತೂರಿನ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬ್ರಿಟಿಷರ ವಿರುದ್ಧ ನಮ್ಮ ಜನರಲ್ಲಿ ಸ್ವಾತಂತ್ರö್ಯದ ಕಿಚ್ಚು ಹಚ್ಚಿದ ವೀರವನಿತೆ ಚನ್ನಮ್ಮ ಹೆಸರು ಇರಿಹಾಸದಲ್ಲಿ ಚಿರಸ್ಥಾಯಿಯಾಗಿರಲಿದೆ. ಝಾನ್ಸಿರಾಣಿ ಲಕ್ಷಿö್ಮÃಬಾಯಿಗಿಂತ ೪೦ ವರ್ಷ ಮುಂಚೆ ಬ್ರಿಟೀಷರ ವಿರುದ್ಧ ಹೋರಾಟದ ಕಹಳೆ ಊದಿದ ಚನ್ನಮ್ಮ ನಮಗೆಲ್ಲ ಸ್ಫೂರ್ತಿ. ನಾಡಿಗಾಗಿ ತನ್ನ ಪ್ರಾಣತ್ಯಾಗ ಮಾಡಿದ ರಾಣಿ ಚನ್ನಮ್ಮಳ ಬಗ್ಗೆ ನಾವು ಅಭಿಮಾನ ಹೊಂದಿರಬೇಕು. ಚನ್ನಮ್ಮ ಹೆಸರು ಸ್ಮರಿಸಿಕೊಂಡಾಗಲೆಲ್ಲ ಕನ್ನಡಿಗರಿಗೆಲ್ಲ ರೋಮಾಂಚನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡಕ್ಕೂ ಕಿತ್ತೂರಿಗೂ ನಂಟಿದ್ದು, ಕಿತ್ತೂರು ಚನ್ನಮ್ಮ ದಾಖಲೆಗಳು ಧಾರವಾಡದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿವೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ಜೀವನ ಸಾಧನೆ ಬಿಂಬಿಸುವ ಮೆಗಾ ನಾಟಕ ಮಾಡಿರುವುದು ಶ್ಲಾಘನೀಯ. ಜೀವಂತ ಆನೆ, ಕುದುರೆ, ಒಂಟೆಗಳು ನೂರಾರು ಕಲಾವಿದರನ್ನೊಳಗೊಂಡ ನಾಟಕ ಕಂಡು ಖುಷಿಯಾಗಿದೆ. ನಾಟಕ ಖುಷಿ ತಂದಿದ್ದು, ನಾಟಕಕ್ಕೆ ಸರಕಾರ ಘೋಷಿಸಿದ ಅನುದಾನದ ಎರಡು ಪಟ್ಟು ಅನುದಾನ ನೀಡುವುದಾಗಿ ಬೊಮ್ಮಾಯಿ ಘೋಷಿಸಿದರು.
ಐತಿಹಾಸಿಕ ನಾಟಕ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿರುವು ಧಾರವಾಡದಲ್ಲಿ ಕಲೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಅವರು ಪರಿಶ್ರಮಪಟ್ಟು ನಾಟಕವನ್ನು ರಂಗಭೂಮಿಗೆ ತಂದಿದ್ದಾರೆ. ಕಲಾಪ್ರೇಮಿ ರಮೇಶ ಪರವಿನಾಯ್ಕರ ಅವರನ್ನು ಗೌರವಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮರಾಠಿಯ “ಜಾಣತಾ ರಾಜಾ’ ಮೆಗಾ ನಾಟಕ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಸಾಧನೆ ಬಿಂಬಿಸಿದರೆ, “ಕನ್ನಡದ “ವೀರರಾಣಿ ಕಿತ್ತೂರ ಚನ್ನಮ್ಮ’ ಮೆಗಾ ನಾಟಕ ಸ್ವಾತಂತ್ರö್ಯ ಹೋರಾಟದ ಬೆಳ್ಳಿಚುಕ್ಕಿ ಚನ್ನಮ್ಮ ಹೋರಾಟವನ್ನು ಬಿಂಬಿಸುತ್ತದೆ ಎಂದರು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ಮೆಗಾ ನಾಟಕ ಪ್ರದರ್ಶನಕ್ಕೆ ರಾಜ್ಯದ ಎಲ್ಲ ಭಾಗಗಳಿಂದ ಬೇಡಿಕೆ ಬರುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿಯೂ ನಾಟಕ ಪ್ರದರ್ಶನಕ್ಕೆ ಸರಕಾರ ಅವಕಾಶ ಕಲ್ಪಿಸಬೇಕು ಎಂದು ಕೋರಿದರು. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ರಮೇಶ ಪರವಿನಾಯ್ಕರ ಅವರಿಗೆ “ರಂಗಜ್ಯೋತಿ’ ಅಭಿದಾನ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ಸಂಕಿರಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.


ಗದಗ ತೋಂಟದ ಶ್ರೀ ಸಿದ್ದರಾಮ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಜಗುರು ಸಂಸ್ಥಾನಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಶಾಸಕ ಅಮೃತ ದೇಸಾಯಿ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಅರವಿಂದರಾವ ದೇಶಪಾಂಡೆ, ತವನಪ್ಪ ಅಷ್ಟಗಿ, ಶಶಿಕಲಾ ಹುಡೇದ ಮೊದಲಾದವರಿದ್ದರು.