ವಿಷಾಹಾರ ಸೇವನೆ: ಹಲವರು ಆಸ್ಪತ್ರೆಗೆ

ಖಾನಾಪುರ
Advertisement

ಬೆಳಗಾವಿ: ವಿಷಾಹಾರ ಸೇವಿಸಿ 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಮೊದಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೊದೆಕೊಪ್ಪ ಗ್ರಾಮದಿಂದ ಇವರು ಯಲ್ಲಮ್ಮ ದೇವತೆಯ ದರ್ಶನಕ್ಕೆ ತೆರಳಿದ್ದರು. ಅಲ್ಲಿ ದರ್ಶನ ಪಡೆದು ಊಟೋಪಚಾರ ಮುಗಿಸಿಕೊಂಡು ಮರಳಿ ಗ್ರಾಮದ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಕೆಲವರಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡ ಕಾರಣಕ್ಕೆ ಅಸ್ವಸ್ಥರಾದವರನ್ನು ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕಲುಷಿತ ಆಹಾರ ಸೇವನೆ ಮಾಡಿರಬಹುದೆಂದು ಅಂದಾಜಿಸಲಾಗಿದೆ.