ಹುಬ್ಬಳ್ಳಿ: ದ್ವಿತೀಯ ವಿಶ್ವ ಮಹಾಯದ್ಧದ ನಂತರ ಪ್ರಪಂಚದಲ್ಲಿ ಆರ್ಥಿಕತೆಯಲ್ಲಿ ಅಗ್ರ ಸ್ಥಾನದಲ್ಲಿದ್ದ ರಷ್ಯಾ ಹಾಗೂ ಇಂಗ್ಲೆಂಡ್ (ಯು.ಕೆ) ತಮ್ಮ ಸ್ಥಾನ ಕಳೆದುಕೊಂಡವು. ಅದೇ ರೀತಿ ಕೋವಿಡ್ ನಂತರ, ಯುಕ್ರೇನ್-ರಷ್ಯಾ ಯುದ್ಧದ ನಂತರ ಆರ್ಥಿಕ ಸಂಕಷ್ಟಕ್ಕೀಡಾದವು. ಆದರೆ, ಭಾರತ ಆರ್ಥಿಕತೆಯಲ್ಲಿ ಅಗ್ರಗಣ್ಯ ದೇಶವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬಲಿಷ್ಠ ದೇಶಗಳನ್ನು ಹಿಂದಿಕ್ಕಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದು ತಿಳಿಸಿದರು.