ಉಪೇಂದ್ರ ನಟನೆಯ ಬಹುನಿರೀಕ್ಷಿತ ಸಿನಿಮಾ ʼಯುಐʼ ಟೈಟಲ್‌ನಿಂದಲೇ ಸಖತ್ ಸದ್ದು ಮಾಡಿತ್ತು. ಮೂಹೂರ್ತ ಆದಾಗಿನಿಂದ ಈ ಚಿತ್ರ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಮಾಡುತ್ತಿದೆ. ಇದೀಗ ಉಪೇಂದ್ರ ತಮ್ಮ ಯುಐ ಸಿನಿಮಾದ ಟೈಟಲ್ ಬಳಸಿ ಗಣರಾಜ್ಯೋತ್ಸವ ದಿನದ ಶುಭ ಕೋರಿದ್ದಾರೆ. ಮೂರು ನಾಮದಲ್ಲಿ ತ್ರಿವರ್ಣ ಕಾಣಿಸಿಕೊಂಡಿದ್ದು, ಮೆಲ್ಬಾಗದಲ್ಲಿ ಯುದ್ಧ ವಿಮಾನಗಳಿವೆ, ಎನೋ ಒಂಥರಾ ಚನ್ನಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದೆ.