ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ

ಮನವಿ
Advertisement

ಕುಷ್ಟಗಿ: ಬಿಜೆಪಿ ಹಮ್ಮಿಕೊಂಡಿದ್ದ ಜನ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರಗಳ ಮಹಾಪೂರವೇ ಹರಿದು ಬಂದವು.
ಕರ್ನಾಟಕ ರಾಜ್ಯ ರೈತ ಸಂಘದಿಂದ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವದು, ಮಳೆಯಿಂದ ಬೆಳೆಹಾನಿ ಪರಿಹಾರ ಹಾಗೂ ರೈತರ ಗೊಬ್ಬರ ಕೊರತೆ ಸಮಸ್ಯೆ ಬಗೆಹರಿಸುವಂತೆ, ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ ವತಿಯಿಂದ ಭೂರಹಿತ ವಿಮುಕ್ತ ದೇವದಾಸಿ ಮಹಿಳೆಯರಿಗೆ ಭೂ ಒಡೆತನ ಯೋಜನೆಯಡಿಯಲ್ಲಿ ಜಮೀನು ಮಂಜೂರು ಮಾಡುವ ಕುರಿತು ಹೀಗೆ ಸಾಕಷ್ಟು ಜನ ಅನೇಕ ಸಂಘ ಸಮಾಜದವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.