ಪಣಜಿ: ಮಾಸ್ಕೋದಿಂದ ಗೋವಾದ ದಾಬೋಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ರಷ್ಯಾದ ಚಾರ್ಟರ್ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಗೋವಾ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಸೋಮವಾರ ತಡರಾತ್ರಿ ಮಾಹಿತಿ ಲಭಿಸಿದೆ. ಇದರ ನಂತರ, ೨೪೪ ಪ್ರಯಾಣಿಕರನ್ನು ಹೊತ್ತ ವಿಮಾನವನ್ನು ತಕ್ಷಣವೇ ಜಾಮ್‌ನಗರ-ಗುಜರಾತ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ರಾತ್ರಿ ೯.೪೯ಕ್ಕೆ ವಿಮಾನ ಅಲ್ಲಿ ಸುರಕ್ಷಿತವಾಗಿ ಇಳಿಯಿತು. ಸದ್ಯ ವಿಮಾನವು ಐಸೋಲೇಶನ್‌ನಲ್ಲಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಬಾಂಬ್ ಬೆದರಿಕೆಯಿಂದಾಗಿ ಗೋವಾದ ದಾಬೋಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ರಷ್ಯಾದ ವಿಮಾನಯಾನ ಸಂಸ್ಥೆ ಅಜುರ್ ಏರ್‌ನ ವಿಮಾನದಲ್ಲಿ ಸ್ಫೋಟಕ ಬಾಂಬ್ ಇದೆ ಎಂದು ಪೊಲೀಸರಿಗೆ ಕರೆ ಬಂದಿತ್ತು.
ಅದೇ ಸಮಯದಲ್ಲಿ ಗೋವಾ ಏರ್ ಟ್ರಾಫಿಕ್ ಕಂಟ್ರೋಲ್ ಅದೇ ವಿಷಯವನ್ನು ಹೊಂದಿರುವ ಮೇಲ್ ಸ್ವೀಕರಿಸಿದೆ. ಇದಾದ ನಂತರ ಹೈ ಅಲರ್ಟ್ ಘೋಷಿಸಲಾಗಿದ್ದು, ವಿಮಾನದ ಪೈಲಟ್‌ಗೆ ಮಾಹಿತಿ ನೀಡಲಾಗಿದೆ. ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ಈ ವಿಮಾನವನ್ನು ತಕ್ಷಣವೇ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಈ ಘಟನೆಯಿಂದಾಗಿ ಗೋವಾ ಪೊಲೀಸರೂ ಅಲರ್ಟ್ ಆಗಿದ್ದು, ದಾಬೋಲಿ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗ ನಿಖರವಾಗಿ ಬಾಂಬ್ ಇ-ಮೇಲ್ ಎಲ್ಲಿಂದ ಬಂತು? ಯಾರು ಮಾಡಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.