ವಿಧಾನಸೌಧದ ಸುತ್ತ ಅತೃಪ್ತ ಆತ್ಮಗಳಿವೆ: ಸಾ.ರಾ. ಮಹೇಶ್

Advertisement

ಬೆಂಗಳೂರು: ಮಂತ್ರಿಗಳಾಗಬೇಕು ಎಂದು ಆಸೆ ಇಟ್ಟುಕೊಂಡ ಎಷ್ಟೋ ಜನ ಸತ್ತು ದೆವ್ವಗಳಾಗಿದ್ದಾರೆ. ಅವರೆಲ್ಲಾ ದೆವ್ವಗಳಾಗಿ ವಿಧಾನಸೌಧದ ಸುತ್ತ ತಿರುಗಾಡ್ತಾ ಇರ್ತಾರೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಸದನದಲ್ಲಿಂದು ಮಾತನಾಡಿರುವ ಅವರು, ಮೊದಲು ಇಲ್ಲಿಗೆ ಆರಿಸಿ ಬರಬೇಕು ಅಂತಾ ಆಸೆಪಡುತ್ತಾರೆ. ಆ ಮೇಲೆ ಮಂತ್ರಿ ಆಗುವ ಆಸೆ ಹುಟ್ಟುತ್ತೆ. ನಂತರ ಇಂತದ್ದೇ ಖಾತೆ ಬೇಕು ಎನ್ನುವ ಆಸೆ ಬರುತ್ತೆ. ಈ ತರಾ ಆಸೆ ಇಟ್ಟುಕೊಂಡ ಅನೇಕರು ಆಸೆ ತೀರದೆ ಸತ್ತೇ ಹೋಗಿದ್ದಾರೆ. ಅವರೆಲ್ಲಾ ವಿಧಾನಸೌಧದ ಸುತ್ತ ಆತ್ಮಗಳಾಗಿ ತಿರುಗುತ್ತಿದ್ದಾರೆ ಎಂದು ಅವರು ತಮಾಷೆ ಮಾಡಿದ್ದಾರೆ.