ವಿಜಯಪುರ ಮಹಾನಗರ ಪಾಲಿಕೆಯ ಮೊದಲ ಚುನಾವಣೆಗೆ ಕ್ಷಣಗಣನೆ

VIJAYPUR
Advertisement

ವಿಜಯಪುರ: ಮಹಾನಗರ ಪಾಲಿಕೆಗೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಮಹಾನಗರ ಪಾಲಿಕೆಯ ೩೫ ವಾರ್ಡ್‌ಗಳಿಗೆ ಚುನಾಚಣೆ ಜರುಗಲಿದ್ದು, ಮತದಾರ ಪ್ರಭು ೧೭೪ ಜನರ ಭವಿಷ್ಯವನ್ನು ಬರೆಯಲಿದ್ದಾನೆ. ನಾಳೆ ೩೦೩ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಮತದಾನ ಆರಂಭವಾಗಲಿದೆ.
ಕಳೆದ ಹಲವಾರು ವರ್ಷಗಳಿಂದ ಚುನಾವಣೆ ನಡೆಯದ್ದರಿಂದ ಹಾಗೂ ಪಾಲಿಕೆಯ ಪ್ರಥಮ ಚುನಾವಣೆಯಾಗಿದ್ದರಿಂದ ಚುನಾವಣೆಯ ರಂಗು ಜೋರಾಗಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು ೩೫೮ ನಾಮಪತ್ರಗಳು ಸ್ವೀಕೃತಿಯಾಗಿದ್ದು, ಪರಿಶೀಲನೆ ನಂತರ ಒಟ್ಟು ೨೩೦ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು, ೧೧೯ ನಾಮಪತ್ರಗಳು ತಿರಸ್ಕೃತವಾಗಿವೆ. ಕ್ರಮಬದ್ಧವಾದ ಅಭ್ಯರ್ಥಿಗಳ ಪೈಕಿ ಒಟ್ಟು ೫೬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಅಂತಿಮವಾಗಿ ಒಟ್ಟು ೧೭೪ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.